ಮೊಸಳೆಯನ್ನು ಸಾಕುವುದು ಹಿಂಸೆಯೆಂದು ಗೊತ್ತಾದವರಿಗೆ
ಮನುಷ್ಯರನ್ನು ಹತ್ಯೆ ಮಾಡುವುದು ಅಹಿಂಸೆಯಾಗಿ ಕಂಡಿದೆ.
#ವಿಪರ್ಯಾಸ
Thursday, 22 August 2019
ಮೊಸಳೆ: ಪ್ರಾಣಿ ಹಿಂಸೆ
ಈದ್ ನ ತ್ಯಾಗ
ಸಂಭ್ರಮಿಸಬೇಕಾದದ್ದು ಈದ್.
ಸಂಭ್ರಮವಿಲ್ಲದೆ ಆಚರಿಸಿದ್ದಾರೆ ಎಂದರೆ ಅದೂ ಕೂಡ ತ್ಯಾಗವೇ..
ನೆರೆ ಸಂತ್ರಸ್ತರಿಗೆ ಮಾಡಿದ ತ್ಯಾಗ!
ಈದ್: ಪ್ರವಾಹ ಸಂತ್ರಸ್ತರಿಗೆ ಮಿಡಿದ ನನ್ನೂರ ಹೃದಯ
ಪ್ರವಾಹದಿಂದ ನನ್ನೂರು ಭೀತಿಯನ್ನು ಎದುರಿಸಿತ್ತು, ಕೆಲವರು ಸಂತ್ರಸ್ತರಾಗಿದ್ದಾರೆ.
ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈದ್ ನ ಇಂದು ರಾಜ್ಯದ ಸಂತ್ರಸ್ತರಿಗೆ ನನ್ನೂರಿನ ಹೃದಯ ಮಿಡಿದಿದೆ.
ನನ್ನೂರ ತೂಗು ಸೇತುವೆ
ನನ್ನೂರಿನ ಸೌಂದರ್ಯ ಹೆಚ್ಚಿಸಿದ 'ತೂಗು ಸೇತುವೆ' ನಿನ್ನೆವರೆಗೂ ನಮ್ಮೊಂದಿಗಿತ್ತು. ಇಂದು ನೇತ್ರಾವತಿ ಮಾತ್ರವಿದೆ. ಕಣ್ಣೀರು ಮಿಶ್ರಿತಗೊಂಡ ನೀರು ಒಂದಷ್ಟು ಹೆಚ್ಚೇ ಶಕ್ತಿಯುತವಾಗಿತ್ತು.
ನನ್ನೂರ ಪ್ರವಾಹ
ನನ್ನೂರು ಅಕ್ಷರಶಃ ಮುಳುಗಡೆಯ ಭೀತಿಯಲ್ಲಿತ್ತು. ಜೀವನದಿ ನೇತ್ರಾವತಿಗೆ ನಮ್ಮ ಪ್ರಾರ್ಥನೆ ಕೇಳಿದೆ. ಸಮಾಧಾನಪಡಿಸಿಕೊಂಡು ನಮ್ಮೊಂದಿಗೆ ಕರುಣೆ ತೋರಿದೆ. ನನ್ನೂರ ಯುವಕರ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯ. ಹಲವಾರು ಪರಿಹಾರದ ಕರೆಗಳು ತಡ ರಾತ್ರಿ ಕೂಡ ನಮ್ಮೊಂದಿಗಿತ್ತು. ಭೀಕರ ಮಳೆಯಿಂದಾದ ನೆರೆಗೆ ಸಮಾಜದಲ್ಲಿನ ಹೃದಯ ವೈಶಾಲ್ಯತೆಯನ್ನು ತೋರಿಸಿದೆ.
ಸದ್ಯ ನನ್ನೂರು ನಿಟ್ಟುಸಿರು ಬಿಟ್ಟಿದೆ.
Thursday, 8 August 2019
ಬಿದ್ದ ಸರಕಾರ; ಎದ್ದು ನಿಲ್ಲದೆ?
ಈ ಬಿದ್ದ ಸರಕಾರ
ಎದ್ದು ನಿಲ್ಲಲು
ಎಷ್ಟು ವರ್ಷಗಳು
ಬೇಕಾಗಬಹುದು?
ರಾಜಕೀಯ ತಜ್ಞರು ಸ್ವಲ್ಪ ಮಾಹಿತಿ ಕೊಡಿ ಪ್ಲೀಸ್.
(ಯಡಿಯೂರಪ್ಪ ಅಧಿಕಾರ ಹಿಡಿದು ಹಲವು ದಿನಗಳು ಕಳೆದರೂ ರಾಜ್ಯದಲ್ಲಿ ಸಂಪುಟ ರಚಿಸದೇ ಇರುವ ಬಗ್ಗೆ)
ಸ್ಪೀಕರ್ ಬೆಲೆ
ಹಲವು ಶಾಸಕರು ಸೇರಿದಂತೆ
ಸ್ಪೀಕರ್ ರವರ
ಬೆಲೆ ಗೊತ್ತಾಗಿರುವುದು
ಇದೇ ಮೊದಲು.
#RameshKumar
#VictoryForDemocracy
Café Coffee Day Siddhartha
ಸಿದ್ಧಾರ್ಥರಂತಹ
ಮತ್ತೊಂದು ಸಿದ್ದಾರ್ಥರನ್ನು
ಸಿದ್ದ ಮಾಡಲು
ಕರ್ನಾಟಕಕ್ಕೆ
ಬಹಳಷ್ಟು ಕಷ್ಟವಿದೆ.
#Siddharth
Thursday, 25 July 2019
Wednesday, 24 July 2019
ಆಟದಲ್ಲೊಂದು ಪ್ರೀತಿ
ಎರಡೂ ತಂಡಗಳ ಮಧ್ಯೆ ಯುದ್ಧವಿರಲಿಲ್ಲ, ಆಟದಲ್ಲೊಂದು ಪ್ರೀತಿಯಿತ್ತು.
ಅದಕ್ಕೆ ವಿಶ್ವದ ಪ್ರೀತಿ ಅವರ ಮುಂದೆ ತಲೆಬಾಗಿದೆ.
#WorldCup2019 #CricketHistory
ವಿಶ್ವಕಪ್ ಫೈನಲ್ 2019
ಎರಡೂ ತಂಡಗಳು ಜಯಿಸಿದ ವಿಶ್ವಕಪ್ ಫೈನಲ್;
ಕ್ರಿಕೆಟ್ ನಲ್ಲಿ ಐತಿಹಾಸಿಕ ದಿನ.
ಇಂಗ್ಲೆಂಡಿನ ಬೌಂಡರಿ ಪ್ರೀತಿಗೆ ಮುತ್ತಿಕ್ಕಿದ ವಿಶ್ವಕಪ್.
#WorldCup2019
ಪತ್ರಕರ್ತರ ಕೊರಗು
'ಕಳೆದ ಒಂದು ವಾರದ ಕೆಲಸದಿಂದ 10 ವರ್ಷದ ಆಯುಷ್ಯ ಕಮ್ಮಿಯಾಯ್ತು' ಎಂಬುವುದು ಹಲವು ಮಾಧ್ಯಮ ಸ್ನೇಹಿತರ ಕೊರಗು. ಪಾಪ!
(ಕರ್ನಾಟಕ ರಾಜಕೀಯದ ಬೆಳವಣಿಗೆ: ಅತೃಪ್ತ ಶಾಸಕರಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ರಾಜೀನಾಮೆಯ ಬೆದರಿಕೆ)
ನಂಬಲು ಅಸಾಧ್ಯ
ಭ್ರಷ್ಟ, ನೀಚ, ಕುದುರೆ ವ್ಯಾಪಾರವನ್ನು ಮಾಡಿಯಾದರೂ ಸರಕಾರ ರಚಿಸಿ ಮುಖ್ಯಮಂತ್ರಿಯಾಗಿ ಒಂದಷ್ಟು ದಿನ ಇರಬಹುದೆಂದರೂ ನಂಬಲು ಸಾಧ್ಯವಿಲ್ಲ. ಮತ್ತೆ ಜೈಲು ನೆನಪಾದರೆ!! ಅಥವಾ ಮತ್ತೊಬ್ಬ ಮುಖ್ಯಮಂತ್ರಿ ಸ್ಥಾನ ನನಗೆ ಬೇಕು ಎಂದು ಡಂಗುರ ಬಾರಿಸುತ್ತಾ ಬಂದರೆ?
ಕಳೆದ ಬಿಜೆಪಿ ಅವಧಿಯಲ್ಲಿ ಒಂದಲ್ಲ ಮೂರು ಮೂರು ಮುಖ್ಯಮಂತ್ರಿ.
#KarnatakaPoliticalCrisis
ಅತೃಪ್ತರಿಗೆ ಕೆಲಸವಿದೆ
ಅತೃಪ್ತ ಶಾಸಕರು ಎಲ್ಲಿದ್ದರು ಸಮಾಜಕ್ಕೆ ಏನೂ ಪ್ರಯೋಜವಿಲ್ಲ. ಹಾಗಾಗಿ ಅವರೆಲ್ಲ ಬರಲಿ.. ಗದ್ದೆಗೆ ಗೊಬ್ಬರ ಹಾಕಿಸೋಣ.
#KarnatakaPoliticalCrisis
ಯಾವುದಕ್ಕೆ ಚಲಾಯಿಸಿದರೂ ಶಾಸಕರು ಬಿಜೆಪಿಗೆ
ಮೊದಲು ಸಮಸ್ಯೆಯಿದ್ದದ್ದು ನೀವು ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೆ ಅದು ಬಿಜೆಪಿಗೆ ಹೋಗ್ತಿತ್ತು.
ಈಗ ನೀವು ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೂ ಚುನಾಯಿತ ಶಾಸಕ ಬಿಜೆಪಿಗೆ ಹೋಗ್ತಿದ್ದಾರೆ.
-ಭಾಷಾಂತರ
#BJPKidnapsMLAs #OperationKamala
ಬಿಜೆಪಿಯ ಅತೃಪ್ತರು
ನಾನೂ ಕಾಂಗ್ರೆಸ್ಸಿನಲ್ಲಿರುತ್ತಿದ್ದರೆ ಅತೃಪ್ತ ಶಾಸಕರಿಗೆ ಸಿಗುವ ದೊಡ್ಡ ಹಣ ನನಗೂ ಸಿಕ್ತಿತ್ತು: ಅತೃಪ್ತಿಗೊಂಡ ಬಿಜೆಪಿ ಶಾಸಕರು 😂
#KarnatakaCrisis
ರೆಸಾರ್ಟ್ ರಾಜಕೀಯ
ಇನ್ನು ರೆಸಾರ್ಟ್ ಮಾಡಿಡುವುದೇ ಉತ್ತಮ
ನಿನ್ನೆ ಕಾಂಗ್ರೆಸ್
ಇಂದು ಬಿಜೆಪಿ
ನಾಳೆ ಜೆಡಿಎಸ್ #KarnatakaPoliticalCrisis
ರಾಜಕಾರಣಿಗಳ ಎರಡು ಮುಖ
ವೇದಿಕೆ ಕಟ್ಟಿ ಬಿಜೆಪಿಗೆ ಹಿಗ್ಗಾ ಮುಗ್ಗಾ ಬೈದು ಭಾಷಣ ಬಿಗಿದು ಚುನಾಯಿತರಾದವರು ಇಂದು ಅವರೊಂದಿಗೆ ವೇದಿಕೆ ಹಂಚಲು ಹೊಂಚು ಹಾಕಿದ್ದಾರೆಂದರೆ!
#ಎರಡುಮುಖ