Tuesday, 17 May 2016

ಕೆಳವ

ಕೊರಿಯಾ ಆಲ್ಮಾರ್, ಕೊರಿಯಾ ಆಲ್ಮಾರೆ
ಇದೆಲೆ, ಬರುಲೆ, ಅಂಗೆನೆಲೆ, ಇಂಗೆನೆಲೆ ಚೆಂತ್ ರೆಸ್ಪೆಕ್ಟ್ ಕೊರ್ತ್ ಬಿಲಿಕ್ರಾರ್...!
ಅಪ್ಪ ಅಯಲ್ ಚೆಲ್ರೊ, ಅಂಗೆನೆ ಬಿಳಿಕಂಡ (ಬಾ, ಪೊ ಬಿಲ್ಚೆಂಗ್ ಮಯ್ಯವು)
ಕೆಳವಮಾರೊ ಬಿಲ್ಚೊ ಫೀಲ್ ಅವ್ರುಂಟು...!😜
ನೇರಾಯ್ಟ್ ಅಯಲ್ ಕೆಲವಮೇ ಅಯ್ತೆ ಇಕ್ರ್...😜😜😜😜

ಚಿರಿಕೆರೆ ಕೊದಿಕ್ಕ್ ರೌನೆ ಅನಿವಾಸಿ

ರಾಯತ್ತ್ಲ್ ಇಕ್ಕೊಂಬೊ ಬಿಯರ್ಚಿಟ್ ಇನ್ನೆ...!
ಸೌದಿಯಲ್ ಉಲ್ಲೆಂಗ ಎಲ್ಲಾ ಮರ ಕುಲ್ಕಿಟ್ ರಾಯತ್ತ್ ಗ್ ಕಾಸ್ ಕಡ್ತ್ ರಾರ್ ಚೆಂತ್...!
ಬನ್ನೆಪ್ಪಲ್ಲೆ ಪಿಡಿಯಾಯೊ... ಈ ಮರ ಕುಲ್ಕ್ ಗೊ ಎತ್ತರೆ ಬಟ ಬಯರ್ ಕೆಟ್ಟಿ ಬೆಕ್ಕ್ ರಾರ್ ಚೆಂತ್...!
ಅಬ್ಬ, ಉಮ್ಮಾ, ಪೆಂಞಯಿ, ಮಕ್ಕ, ಅಂಗಲ್, ಪೆಂಗಲ್ ರೊ ಮೊಗತ್ತ್ಲ್
ಚಿರಿಕೆರೆ ಕೊದಿಕ್ಕ್ ರೌನೆ ಅನಿವಾಸಿ 



Saturday, 12 March 2016

ಸರಕಾರದ ಟಿಪ್ಪು ಜಯಂತಿ: ಕಂಬಿಯೊಳಗೆ ಬಂಧಿಯಾದ ಅಮಾಯಕರು

     
ಕರ್ನಾಟಕದ ರಾಜ್ಯದ ಮಾನ್ಯ ಸಿ.ಎಂ ಸಿದ್ದರಾಮಯ್ಯರವರ ನೇತೃತ್ವದ ಸರಕಾರವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ತನ್ನ ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟು, ರಣರಂಗದಲ್ಲಿ ವೀರ ಮರಣವನ್ನಪ್ಪಿದ, ಅಪ್ಪಟ ದೇಶ ಪ್ರೇಮಿ ಶಹೀದ್ ಟಿಪ್ಪು ಸುಲ್ತಾನರ ರ.ಅ ಜನ್ಮ ದಿನವನ್ನು ಆಚರಿಸುವುದಕ್ಕಾಗಿ ವರ್ಷದ ನವೆಂಬರ್ 10ರ ದಿನವನ್ನು “ಟಿಪ್ಪು ಜನ್ಮ ಜಯಂತಿ ದಿನ” ಎಂಬ ಹೆಸರಿನಲ್ಲಿ ಘೋಷಿಸಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹವಾಗಿದೆ.
          ಟಿಪ್ಪು ಜನ್ಮ ದಿನವನ್ನು ರಾಜ್ಯದ ಸರ್ವ ಜನತೆಯು ಸಂಭ್ರಮ ಸಡಗರದಿಂದ ಆಚರಿಸಬೇಕಾಗಿದ್ದು ಮತ್ತು ಟಿಪ್ಪು ಸುಲ್ತಾರು ಈ ದೇಶಕ್ಕೆ ಕೊಟ್ಟ ಕೊಡುಗೆ ಮತ್ತು ಇತಿಹಾಸವನ್ನು ಕಟ್ಟಕಡೆಯ ಜನತೆಗೂ ತಲುಪಿಸುವಂತಹ ಕೆಲಸಗಳು ಸರಕಾರದಿಂದ ಆಗಬೇಕಿತ್ತು.  ಆದರೆ ವಿಪರ್ಯಾಸವೆಂದೇ ಹೇಳಬಹುದು ಟಿಪ್ಪು ಸುಲ್ತಾನರ ಜನ್ಮ ಜಯಂತಿಯು ಕೇವಲ ಅಲ್ಪಸಂಖ್ಯಾತರಾದ ಮುಸಲ್ಮಾನರಿಗೆ ಮಾತ್ರ ಮೀಸಲಿಟ್ಟಿದ್ದು.
         ಸರಕಾರದ ಟಿಪ್ಪು ಜಯಂತಿಯ ನೆಪದಲ್ಲಿ ಕರಾಳ ಜಯಂತಿಯನ್ನು ಆಚರಿಸಿದವರು ಈ ರಾಜ್ಯದ ಅಲ್ಪಸಂಖ್ಯಾತರು ಎಂಬುವುದು ಸ್ಪಷ್ಟ. ಟಿಪ್ಪು ಜಯಂತಿ ಸಂದರ್ಭದಲ್ಲಿ ಕೊಡಗಿನಲ್ಲಿ ನಡೆದ ಘಟನೆಯ ಬಗ್ಗೆ ಅವಲೋಕಿಸುವಾಗ ಸರಕಾರವು ಟಿಪ್ಪು ಸುಲ್ತಾನರ ಜಯಂತಿಯನ್ನು ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಾಗಿಸಿದೆ ಎಂದು ಕಾಣುತ್ತಿದೆ. ಯಾಕೆಂದರೆ ಕೊಡಗಿನಲ್ಲಿ ಸರಕಾರದ ವತಿಯಿಂದಲೇ ನಡೆದ ಟಿಪ್ಪು ಜಯಂತಿಯಲ್ಲಿ ದೇಶದ್ರೋಹಿಗಳು ನಡೆಸಿದ ಕುಕೃತ್ಯಗಳಿಂದ ಕರಾಳ ದಿನವನ್ನು ಎದುರಿಸುತ್ತಿರುವವರು ಕೊಡಗಿನ ಅಮಾಯಕ ಮುಸಲ್ಮಾನರು. ಜೈಲಿನೊಳಗೆ ಬಂಧಿಯಾಗಿ ದಿನಗಳನ್ನು ಕಣ್ಣೀರಿನೊಂದಿಗೆ ಮುಂದೂಡುತ್ತಿದ್ದಾರೆ. ಹರಸಾಹಸಪಟ್ಟು ಸರಕಾರವು ಆಚರಿಸಿದ ಜನ್ಮ ಜಯಂತಿಯೂ ಶಾಹುಲ್ ಹಮೀದ್ ಎಂಬ ಯುವಕನನ್ನು ಹಾಗೂ ಜನ್ಮ ಜಯಂತಿಯನ್ನು ವಿರೋಧಿಸಿ ದೊಂಬಿ ಗಲಭೆಯಲ್ಲಿದ್ದ ಕುಟ್ಟಪ್ಪ ಎಂಬವರ ಸಾವಿಗೆ ಕಾರಣವಾಯಿತು. ಅಂತೂ ಸರಕಾರದ ಆಚರಣೆಯಲ್ಲೂ ಇಲ್ಲಿನ ಜನಸಾಮಾನ್ಯರಿಗೆ ರಕ್ಷಣೆ ಇಲ್ಲವೆಂದು ಕೊಡಗಿನಲ್ಲಿ ತೋರಿಸಿಕೊಟ್ಟಿತು.
       ಸರಕಾರದ ಜಯಂತಿ ಆಚರಣೆಯಿಂದ  ಹಲವಾರು ಅಲ್ಪಸಂಖ್ಯಾತ ಅಮಾಯಕ ಯುವಕರು ಜೈಲಿನ ಕಂಬಿಯನ್ನು ಎಣಿಸುವಂತೆ ಮಾಡಿರುವುದು ಖೇಧಕರ. ಒಂದಷ್ಟು ಯುವಕರು ಜಾಮೀನಿನ ಮೂಲಕ ಹೊರಬಂದರೆ, ತನ್ನ ಮನೆಗಳಿಗೆ ಆಶ್ರಯವಾಗಿದ್ದ ಕೆಲ ಯುವಕರು ಇಂದು ಜೈಲಿನೊಳಗೆ ಸರಕಾರದ ಮಾಡಿದ ತಪ್ಪಿಗಾಗಿ ನೋವನ್ನು ಅನುಭವಿಸುತ್ತಿದ್ದಾರೆ. ಘಟನೆಗೆ ಕಾರಣರಾದವರು ಹಾಯಾಗಿದ್ದಾರೆ.
ಸರಕಾರ ಈ ತರಹದಲ್ಲಿ ಜನ್ಮ ಜಯಂತಿಯನ್ನು ಆಚರಿಸುವುದನ್ನು ಮುಂದುವರಿಸುವುದಾದರೆ, ದಯವಿಟ್ಟು ನಮಿಗೆ ಇಂತಹ ಆಚರಣೆ ಯಾ ಜಯಂತಿಯ ಅವಶ್ಯಕತೆಯಿಲ್ಲ.

     
ಇಲ್ಲಿನ ಅಲ್ಪಸಂಖ್ಯಾತ ಸಮುದಾಯು ಟಿಪ್ಪು ಸುಲ್ತಾರನ ದೇಶಪ್ರೇಮ ಹಾಗೂ ಅವರ ಅಡಳಿತದ ಸಂದರ್ಭ ಜನಸಾಮಾನ್ಯರು ಸೌಹಾರ್ಧತೆಯಿಂದ ಬಾಳಿ ಬೆಳೆದ ಚರಿತ್ರೆಯ ಬಗ್ಗೆ ಆಳ ಅಧ್ಯಯನ ನಡೆಸಿದವರಾಗಿದ್ದಾರೆ ಎಂಬುವುದು ಸತ್ಯ ವಿಚಾರ. 

Wednesday, 24 February 2016

ಅಮಾನವೀಯ ಕೃತ್ಯಕ್ಕೆ ಮತ್ತೊಮ್ಮೆ ಬೆತ್ತಲಾಯಿತು ಮಂಗಳೂರು

ಅಮಾನವೀಯ ಕೃತ್ಯಕ್ಕೆ ಮತ್ತೊಮ್ಮೆ ಬೆತ್ತಲಾಯಿತು ಬುದ್ಧಿವಂತರ ಜಿಲ್ಲೆ ಎಂದು ಹೇಳಲ್ಪಡುತ್ತಿರುವ ಮಂಗಳೂರು...
ಗಾಂಜಾ ವ್ಯಸನಿಗಳಿಂದ ವಿದ್ಯಾರ್ಥಿಯನ್ನು ನಗ್ನಗೊಳಿಸಿ ಹಲ್ಲೆ

Wednesday, 28 October 2015

ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ನನ್ನ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಚಿತ್ರ

ಇದುವರೆಗೆ ಗೂಗಲ್ ನಲ್ಲಿ ಮಾತ್ರ ಇಂತಹ ಚಿತ್ರಣವನ್ನು ನೋಡಿದ್ದ ನಾನು, ಸ್ವತಹಃ ಇಂದು ನನ್ನ ಕ್ಯಾಮರಾದ ಕಣ್ಣುಗಳಲ್ಲಿ ಸೆರೆಯಾಯಿತು.
ನನ್ನ ಕಣ್ಣುಗಳು ಈ ಮಕ್ಕಳ ವಾಸ್ತವ ಸ್ಥಿತಿಯನ್ನು ಕಾಣುವ ಫಿಕ್ಸಲ್ ನ್ನು ಕಳೆದುಕೊಂಡು, ಕಣ್ಣೀರ ಧಾರೆಯ ಮೂಲಕ ನೋಡಲು ಚಡ ಪಡಿಸುತ್ತಿದ್ದವು.
ಮುಗ್ದ ಮಕ್ಕಳ ಮುಖದಲ್ಲಿರುವ ನಗು ಸರ್ವವನ್ನು ವಿವರಿಸುತ್ತಿದೆ. 
ತಾತ್ಕಾಲಿಕವಾಗಿ ನಿರ್ಮಿಸಿದ ಮನೆಗಳು, ಧರಿಸಲು ಸರಿಯಾದ ಬಟ್ಟೆಗಳಲ್ಲಿಲ್ಲ, ವಿದ್ಯುತ್ ಕಾಣದ ಮನೆಗಳೇ ಜಾಸ್ತಿ , ಬೆಳಗ್ಗಿನ ಉಪಹಾರದ ಬಗ್ಗೆ ಗೊತ್ತೇ ಇಲ್ಲ , ಚಾಕ್ಲೆಟ್ ನಲ್ಲಿ ಅತೀವ ಪ್ರೀತಿ ಬೆಳೆಸಿರುವ ಈ ಮಕ್ಕಳ ಬಗ್ಗೆ ವಿವರಿಸಿ ಬರೆಯಲು ನನ್ನಲ್ಲಿಂದ ಅಕ್ಷರಗಳಿಲ್ಲ.






Sunday, 16 August 2015

ಕೋಮುವಾದಿ ಹಾಗೂ ಭ್ರಷ್ಟ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದ ಎಸ್.ಡಿ.ಪಿ.ಐ



               ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ಚುನಾವಣೆಯು ಕಾವಿನಿಂದ ಕುದಿಯುತ್ತಿದೆ. ಇತ್ತ ರಾಜಕೀಯ ಪಕ್ಷಗಳ ಡೊಂಬರಾಟ ಜೋರಾಗುತ್ತಿದೆ. ತನ್ನ ಎದುರಾಳಿಯ ಅಪಪ್ರಚಾರವು ಮಿತಿ ಮೀರುತ್ತಿದೆ. ಮತದಾರರನ್ನು ವಂಚಿಸುವ ನಾನಾ ರೀತಿಯ ಭರವಸೆಗಳು ಮುಗಿಲು ಮುಟ್ಟಿದೆ. ಮತದಾರರನ್ನು ಮತಬ್ಯಾಂಕ್‍ಗಳನ್ನಾಗಿ ಪರಿವರ್ತಿಸಿ ದೇಶ ಮತ್ತು ರಾಜ್ಯವನ್ನು ಆಳಿದಂತಹ ರಾಜಕೀಯ ಪಕ್ಷಗಳಿಗೆ ಇತ್ತೀಚಿನ ವರ್ಷಗಳಲ್ಲಿ ಹೋರಾಟದ ಮೂಲಕ ಜನ್ಮ ಪಡೆದು, ಕಳಂಕಿತಗೊಂಡಿರುವ ರಾಜಕೀಯ ಕ್ಷೇತ್ರವನ್ನು ಶುಚಿಗೊಳಿಸುವತ್ತಾ ಪಣತೊಟ್ಟು, ಸರ್ವರಿಗೂ ಸಮಪಾಲು-ಸಮಬಾಳು ಮತ್ತು ಸಮಾನ ನ್ಯಾಯಗಳಿರುವ ಸುಂದರ, ಸುಭದ್ರ ರಾಷ್ಟ್ರ ನಿರ್ಮಾಣದ ಕನಸಿನ ಗೋಪುರದೊಂದಿಗೆ “ನಮ್ಮ ರಾಜಕೀಯ ಉಧಾತ್ತ ಮೌಲ್ಯಗಳಿಗಾಗಿ, ವೃತ್ತಿಗಾಗಿ ಅಲ್ಲ” ಎಂಬ ಘೋಷಣೆಯೊಂದಿಗೆ ಹಾಗೂ ಹಸಿವು ಮುಕ್ತ, ಭಯ ಮುಕ್ತವಾದ ಸಮಾಜ ನಿರ್ಮಾಣದ ಗುರಿಯೊಂದಿಗೆ ದೃಢ ಹೆಜ್ಜೆಯನ್ನಿಟ್ಟು ತಳಮಟ್ಟದಿಂದಲೇ ಬಲಿಷ್ಟವಾಗಿ ಕಾರ್ಯಕರ್ತರನ್ನು ರೂಪಿಸಿಕೊಂಡು, ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸಂಚಲನವನ್ನು ಮೂಡಿಸಿ, ಇತರ ಚುನಾವಣಾ ರಾಜಕೀಯ ಪಕ್ಷಗಳಿಗೆ ತಲೆ ನೋವಾಗಿ ಪರಿಣಮಿಸಿದ ದೇಶದ ಏಕೈಕ ರಾಜಕೀಯ ಚಳುವಳಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ).
ಅಲ್ಪಸಂಖ್ಯಾತ, ದಮನಿತ, ಹಿಂದುಳಿದ, ಶೋಷಿತ ವರ್ಗದ ಆಶಾಕಿರಣವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಧಮನಕ್ಕೊಳಗಾದಂತಹ ಜನಸಾಮಾನ್ಯರ ಧ್ವನಿಯಾಗಿ ರಾಷ್ಟ್ರಾದ್ಯಂತ ಹೋರಾಟದ ಮುಂಚೂಣಿಯಲ್ಲಿರುವುದು ಪ್ರಶಂಸನೀಯ.ರಾಜಕೀಯವನ್ನು ಸಮಾಜ ಸೇವೆಯ ಬದಲಾಗಿ ತನ್ನ ವೃತ್ತಿಯಾಗಿ ಬಳಸಿಕೊಂಡಿರುವ ಜನಪ್ರತಿನಿಧಿಗಳು ಜನಸಾಮಾನ್ಯರ ಸುಖ-ದುಃಖ ವನ್ನು ಅರ್ತೈಸಿಕೊಳ್ಳಲು ವ್ಯರ್ತವಾಗಿದ್ದಾರೆ ಎಂಬುವುದು ಕಟು ಸತ್ಯ.
             ಬದಲಾವಣೆಯು ಅಗತ್ಯ ಮಾತ್ರವಲ್ಲ ಅನಿವಾರ್ಯವು ಕೂಡ ಹೌದು, ಕಳೆದ ಬಿ.ಬಿ.ಎಂ.ಪಿ ಚುನಾಣೆಯಲ್ಲಿ ಆರಿಸಿ ಕಳುಹಿಸಿದಂತಹ ಜನಪ್ರತಿನಿಧಿಗಳ ಅಭಿವೃದ್ಧಿಯಿಂದ ರೋಸಿ ಹೋದ ಜನಸಾಮಾನ್ಯರ ಪರವಾಗಿ, ಜನಪರ ಕಾಳಜಿ ಮತ್ತು ಜನಪರ ಹೋರಾಟದ ಹಿನ್ನಲೆಯುಳ್ಳಂತಹ ಮತ್ತು ಅತ್ಯಂತ ಸ್ಪಷ್ಟ ದೃಷ್ಠಿಕೋನ, ಇಚ್ಚಾಶಕ್ತಿ ಇರುವ 18 ಅಭ್ಯರ್ಥಿಗಳನ್ನು  ಎಸ್.ಡಿ.ಪಿ.ಐ ಎಂಬ ರಾಜಕೀಯ ಚಳುವಳಿಯು “ಭ್ರಷ್ಟಾಚಾರ ಮುಕ್ತ, ಜನಪರ ಕಾರ್ಪೋರೇಟರ್” ಎಂಬ ಸಂದೇಶದೊಂದಿಗೆ ಚುನಾವಣಾ ಅಖಾಡಕ್ಕಿಲಿಸಿದೆ.
ರಾಜಕೀಯ ಅಖಾಡದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೊಸ್ಕರ ಸರ್ವ ರೀತಿಯಲ್ಲೂ ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವಂತಹ ತಮ್ಮ ಎಂದಿನ ಕಾಯಕವನ್ನು ಇತರ ಪಕ್ಷಗಳು ಪ್ರಾರಂಬಿಸತೊಡಗಿದೆ. ತಮ್ಮ ಎಂದಿನ ಕಾಯಕ್ಕೆ ಬಲಿಯಾಗುವವರು ಜನಸಾಮಾನ್ಯರು ಎಂಬುವುದು ಸ್ಪಷ್ಟ. 
ಈ ದೇಶದ ರಾಜಕೀಯ ಪಕ್ಷಗಳ ನೈಜ ಮುಖವಾಡವನ್ನು ದೇಶದ ಇತಿಹಾಸವೇ ನಮಗೆ ಸ್ಪಷ್ಟವಾಗಿ ತಿಳಿಸುತ್ತಿದೆ. ಆದರಿಂದ ತಮ್ಮ ಅತ್ಯಮೂಲ್ಯವಾದ ಮತವನ್ನು ಹೆಂಡ, ಸೀರೆ, ಹಣಕ್ಕಾಗಿ ಮಾರಿಕೊಳ್ಳದೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮತ್ತು , ಪರಸ್ಪರ  ಪ್ರೀತಿ ,ಸ್ನೇಹ, ವಾತ್ಸಲ್ಯದೊಂದಿಗೆ ಜನರೊಂದಿಗೆ ಬೆರೆಯುವ ನೈಜ ಜನಪರ ಕಾಳಜಿಯುಳ್ಳ ವ್ಯಕ್ತಿಯನ್ನು ಈ ಬರುವ ಚುನಾವಣೆಯಲ್ಲಿ ಚುನಾಯಿಸಿ, ಸ್ವಚ್ಚ-ಸುಂದರ ಬೆಂಗಳೂರನ್ನು ನಿರ್ಮಿಸಿ. 

ರಾಜ್ಯ ರಾಜಧಾನಿಯ ಅಭಿವೃದ್ಧಿಗೆ ಒಂದು ಉದಾಹರಣೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ತನಿಸಂದ್ರ ಎಂಬಲ್ಲಿ 71,855 ಜನಸಂಖ್ಯೆ ಇರುವ ಮತ್ತು 65,000 ಮತದಾರರಿರುವ ಬೆಂಗಳೂರಿನ ಅತ್ಯಂತ ದೊಡ್ಡ ವಾರ್ಡ್ ಎಂಬ ಹೆಗ್ಗಳಿಕೆಯನ್ನು ಪಡೆದ ವಾರ್ಡ್.  ಆದರೆ ಇಲ್ಲಿನ ಅವ್ಯವಸ್ಥೆಯನ್ನು ವಿವರಿಸಿ ಬರೆಯಲು ಸಾಧ್ಯವಿಲ್ಲ. ಬಿ.ಬಿ.ಎಂ.ಪಿ ಯ ಅಭಿವೃದ್ಧಿ ರ್ಯಾಂಕಿಂಗ್‍ನಲ್ಲಿ 198 ವಾರ್ಡ್‍ಗಳಲ್ಲಿ ಕೊನೆಯ ಸ್ಥಾನ ಪಡೆದು, ಅಭಿವೃದ್ಧಿ ಸೂಚ್ಯಂಕದಲ್ಲಿ 10ಕ್ಕೆ ಕೇವಲ 2.36 ಅಂಕ ಪಡೆದ ವಾರ್ಡ್ ಎಂಬುವುದು ಕಳೆದ ಚುನಾಯಿತ ಜನಪ್ರತಿನಿಧಿಗಳ ಭೀಕರ ಅಭಿವೃದ್ಧಿಯನ್ನು ಸೂಚಿಸುತ್ತದೆ.
ರಾಶಿ ರಾಶಿ ಬಿದ್ದಿರುವ ಕಸ ಕಡ್ಡಿಗಳು, ನಡೆದಾಡಲೂ ಪರದಾಡುವ ಗುಂಡಿ ಬಿದ್ದ ರಸ್ತೆಗಳು, ಕೊಳಚೆ ತುಂಬಿರುವ ಚರಂಡಿ ಇದೆಲ್ಲವು ಈ ವಾರ್ಡಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿತ್ರಣ. ಕುಡಿಯುವ ನೀರಿನ ಸಮಸ್ಯೆ ಇಲ್ಲಿನ ಬಹುದೊಡ್ಡ ಸಮಸ್ಯೆ. ಹೆಚ್ಚಿನ ಜನರು ಪಡಿತರ ಚೀಟಿಯಿಂದ ದೂರ ಉಳಿದಿದ್ದಾರೆ, ಮತದಾರನ ಗುರಿತಿನ ಚೀಟಿ, ಆಧಾರ್ ಕಾರ್ಡ್, ಆರೋಗ್ಯ ಚೀಟಿ ಯನ್ನು ಶೇ 30% ಪಡೆದಿಲ್ಲ. ಈ ರೀತಿಯ ಸಮಸ್ಯೆಗಳ ಆಗರವೇ ಈ ವಾರ್ಡ್. 

Thursday, 23 April 2015

ದಲಿತರ ಹತ್ಯೆ: ಎಚ್ಚೆತ್ತುಕೊಳ್ಳಬೇಕಾದ ಸರಕಾರ


ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯಲ್ಲಿ ಇತ್ತೀಚೆಗೆ ಇಬ್ಬರು ದಲಿತ ಸಹೋದರರನ್ನು ನಂಬಲಸಾಧ್ಯವಾದ ರೀತಿಯಲ್ಲಿ ತಲೆ ಕತ್ತರಿಸಿ ಕೊಲೆಗೆಯ್ಯಲಾಗಿತ್ತು.
ನೋಡಿ. ಎಷ್ಟೊಂದು ವಿಪರ್ಯಾಸ! ದಲಿತರು ಎಂಬ ಏಕ ಕಾರಣಕ್ಕೆ ಪ್ರಕರಣವು ಮೂಲೆ ಸೇರಿದೆ. ಸಂತ್ರಸ್ತ ಕುಟುಂಬದ ಆಧಾರ ಸ್ತಂಭವು ಇಲ್ಲದೆ, ಕುಟುಂಬವು ಬೀದಿ ಪಾಲಾಗಿವೆ.
ಆದರೆ ನಮ್ಮನ್ನಾಳುವ ಸರಕಾರ ಯಾ ಜನಪ್ರತಿನಿಧಿಗಳು ಈ ಬಗ್ಗೆ ಇದುವರೆಗೂ ತುಟಿ ಪಿಟಿಕ್ ಅನ್ನದಿರುವುದು ನಮ್ಮ ರಾಜ್ಯಕ್ಕೆ ಮಾಡಿದ ಅವಮಾನವಲ್ಲದೇ ಇನ್ನೇನು?
ಕೇವಲ ಚುನಾವಣಾ ರಾಜಕೀಯದಲ್ಲಿ ಮುಳುಗಿಹೋದ ಇಲ್ಲಿನ ರಾಜಕೀಯ ಪಕ್ಷಗಳು ಕರುಡುತನವನ್ನು ಪ್ರದರ್ಶಿಸುತ್ತಿದೆ. ಪ್ರಕರಣವು ಘೋರ ಅಪರಾಧವಾಗಿದ್ದರು, ಈ ಬಗ್ಗೆ ಎಲ್ಲೂ ಚರ್ಚೆಗಳಾಗದಿರುವುದು ದುಃಖಕರ ಸಂಗತಿ.
ಹಿಂದೂ-ನಾವೆಲ್ಲ ಒಂದು ಎಂದು ಬೊಬ್ಬೆ ಹೊಡೆಯುತ್ತಿರುವ ಸಂಘಗಳು ಇದುವರೆಗೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನವನ್ನಾದರು ನೀಡಲು ಮುಂದೆ ಬಂದಿಲ್ಲ. ಮಾತ್ರವಲ್ಲದೆ ಪ್ರಕರಣವನ್ನು ತೆರೆಮರೆಯಲ್ಲಿ ನಿಂತು ಕೊಂಡು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂಬುವುದು ಮೇಲ್ನೋಟಕ್ಕೆ ಸಾಬೀತಾದ ಸತ್ಯಾಂಶವಾಗಿದೆ. ಪ್ರಕರಣದ ಪ್ರಮುಖ ಆರೋಪಿಗೆ ಮಾನಸಿಕ ಅಸ್ವಸ್ತನೆಂಬ ಪಟ್ಟವನ್ನು ಕಟ್ಟಲಾಗಿದ್ದು, ಪ್ರಕರಣವನ್ನು ಮೂಲೆಗುಂಪಾಗಿಸುವ ಎಲ್ಲಾ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ.
ಇತ್ತ ಘೋರ ಪ್ರಕರಣವು ಮೂಲೆ ಗುಂಪಾಗುವುದನ್ನು ಗಮನಿಸಿದ, ಹಸಿವು ಮುಕ್ತ ಸ್ವತಂತ್ರ್ಯ, ಭಯ ಮುಕ್ತ ಸ್ವತಂತ್ರ್ಯ ಎಂಬ ಉದಾತ್ತ ಧೈಯವಾಕ್ಯದೊಂದಿಗೆ ಹೋರಾಟದ ಕಿಚ್ಚನ್ನು ಹಚ್ಚುವುದರ ಮೂಲಕ ಸಮಾಜಕ್ಕೆ ಪರಿಚಯವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿರುವ ರಾಜಕೀಯ ಚಳವಳಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿರುವುದು ಸಂತೋಷದಾಯಕ ವಿಚಾರ.
ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿಯು ಸಂತ್ರಸ್ತ ಕುಟುಂಬದ ಪ್ರಥಮ ಭೇಟಿಯ ಸಮಯದಲ್ಲಿ ಕುಟುಂಬಕ್ಕೆ ಸಾಂತ್ವಾನವನ್ನು ನೀಡುತ್ತಾ “ನ್ಯಾಯ ದೊರಕುವವರೆಗೂ ನಿಮ್ಮೊಂದಿಗೆ ನಾವಿದ್ದೇವೆ” ಎಂಬ ಮಾತನ್ನು ಕುಟುಂಬದ ಮುಂದಿಟ್ಟಾಗ, ಕುಟುಂಬವು ಒಂದಲ್ಪ ನಿಟ್ಟುಸಿರು ಬಿಟ್ಟಿತು ಎಂಬುವುದ ಇದೀಗಾಗಲೇ ಸಮಾಜಕ್ಕೆ ತಿಳಿದಿರುವ ವಾಸ್ತವತೆ.
ಪ್ರಕರಣದ ನ್ಯಾಯದ ಈಡೇರಿಕೆಯ ನೇತ್ರತ್ವವನ್ನು ವಹಿಸಿಕೊಂಡ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಯವರು ಎಪ್ರಿಲ್ 4 ರಂದು ಸಂತ್ರಸ್ತ ಕುಟುಂಬದ ಜೊತೆ ಸಂತೆಮರಹಳ್ಳಿಯಿಂದ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ವರೆಗೆ ಸುಮಾರು 17 ಕಿ.ಮೀ ದೂರ ಬೃಹತ್ ಪಾದಯಾತ್ರೆಯನ್ನು ಕೈಗೊಂಡು, ಮೂಲೆಗುಂಪಾಗಿದ್ದ ಪ್ರಕರಣಕ್ಕೆ ಪುನರ್‍ಜನ್ಮವನ್ನು ನೀಡಿ, ಸರಕಾರದ ಗಮನಕ್ಕೆ ತಂದರು. ಆದರೂ ಈ ಬಗ್ಗೆ ಎಚ್ಚೆತ್ತುಕೊಳ್ಳದ ಸರಕಾರದ ನಿರ್ಜೀವ ಧೋರಣೆಯ ಬಗ್ಗೆ ಎಸ್.ಡಿ.ಪಿ.ಐ ಪಕ್ಷವು ಪ್ರತಿಭಟನೆಗೆ ಸಜ್ಜುಗೊಂಡು ರಾಜ್ಯ ವಿವಿಧ ಪ್ರಗತಿಪರರು ಹಾಗೂ ಚಿಂತಕರೊಂದಿಗೆ ಜೊತೆಗೂಡಿ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿ ನಡೆಸಿತು. ಇತ್ತ ಮಾಧ್ಯಮಗಳಲ್ಲೂ ಚರ್ಚೆಗಳು ಪ್ರಾರಂಭಗೊಂಡಿದೆ, ಸರಕಾರವು ಎಚ್ಚೆತ್ತುಕೊಳ್ಳುವ ಅನಿವಾರ್ಯತೆಗಳಿವೆ. ಎಸ್.ಡಿ.ಪಿ.ಐ ಯೂ ಕುಟುಂಬದ ಪರ ವಿವಿಧ ಹಕ್ಕೊತ್ತಾಯಗಳನ್ನು ಸರಕಾರಕ್ಕೆ ಸಲ್ಲಿಸಿದೆ. ಸಂತ್ರಸ್ತ ಕುಟಂಬಕ್ಕೆ ನ್ಯಾಯ ದೊರಕಲಿ ಎಂದು ಬೇಡಿಕೊಳ್ಳುತ್ತಾ, ಎಸ್.ಡಿ.ಪಿ.ಐ ಯ ನ್ಯಾಯ ಯುತ ಹೋರಾಟವು ಸರಕಾರದ ಕಣ್ಣು ತೆರಸಲಿ.
-ರಿಲ್ವಾನ್ ಹುಸೈನ್ ವಳಾಲ್