Thursday 23 April 2015

ದಲಿತರ ಹತ್ಯೆ: ಎಚ್ಚೆತ್ತುಕೊಳ್ಳಬೇಕಾದ ಸರಕಾರ


ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯಲ್ಲಿ ಇತ್ತೀಚೆಗೆ ಇಬ್ಬರು ದಲಿತ ಸಹೋದರರನ್ನು ನಂಬಲಸಾಧ್ಯವಾದ ರೀತಿಯಲ್ಲಿ ತಲೆ ಕತ್ತರಿಸಿ ಕೊಲೆಗೆಯ್ಯಲಾಗಿತ್ತು.
ನೋಡಿ. ಎಷ್ಟೊಂದು ವಿಪರ್ಯಾಸ! ದಲಿತರು ಎಂಬ ಏಕ ಕಾರಣಕ್ಕೆ ಪ್ರಕರಣವು ಮೂಲೆ ಸೇರಿದೆ. ಸಂತ್ರಸ್ತ ಕುಟುಂಬದ ಆಧಾರ ಸ್ತಂಭವು ಇಲ್ಲದೆ, ಕುಟುಂಬವು ಬೀದಿ ಪಾಲಾಗಿವೆ.
ಆದರೆ ನಮ್ಮನ್ನಾಳುವ ಸರಕಾರ ಯಾ ಜನಪ್ರತಿನಿಧಿಗಳು ಈ ಬಗ್ಗೆ ಇದುವರೆಗೂ ತುಟಿ ಪಿಟಿಕ್ ಅನ್ನದಿರುವುದು ನಮ್ಮ ರಾಜ್ಯಕ್ಕೆ ಮಾಡಿದ ಅವಮಾನವಲ್ಲದೇ ಇನ್ನೇನು?
ಕೇವಲ ಚುನಾವಣಾ ರಾಜಕೀಯದಲ್ಲಿ ಮುಳುಗಿಹೋದ ಇಲ್ಲಿನ ರಾಜಕೀಯ ಪಕ್ಷಗಳು ಕರುಡುತನವನ್ನು ಪ್ರದರ್ಶಿಸುತ್ತಿದೆ. ಪ್ರಕರಣವು ಘೋರ ಅಪರಾಧವಾಗಿದ್ದರು, ಈ ಬಗ್ಗೆ ಎಲ್ಲೂ ಚರ್ಚೆಗಳಾಗದಿರುವುದು ದುಃಖಕರ ಸಂಗತಿ.
ಹಿಂದೂ-ನಾವೆಲ್ಲ ಒಂದು ಎಂದು ಬೊಬ್ಬೆ ಹೊಡೆಯುತ್ತಿರುವ ಸಂಘಗಳು ಇದುವರೆಗೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನವನ್ನಾದರು ನೀಡಲು ಮುಂದೆ ಬಂದಿಲ್ಲ. ಮಾತ್ರವಲ್ಲದೆ ಪ್ರಕರಣವನ್ನು ತೆರೆಮರೆಯಲ್ಲಿ ನಿಂತು ಕೊಂಡು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂಬುವುದು ಮೇಲ್ನೋಟಕ್ಕೆ ಸಾಬೀತಾದ ಸತ್ಯಾಂಶವಾಗಿದೆ. ಪ್ರಕರಣದ ಪ್ರಮುಖ ಆರೋಪಿಗೆ ಮಾನಸಿಕ ಅಸ್ವಸ್ತನೆಂಬ ಪಟ್ಟವನ್ನು ಕಟ್ಟಲಾಗಿದ್ದು, ಪ್ರಕರಣವನ್ನು ಮೂಲೆಗುಂಪಾಗಿಸುವ ಎಲ್ಲಾ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ.
ಇತ್ತ ಘೋರ ಪ್ರಕರಣವು ಮೂಲೆ ಗುಂಪಾಗುವುದನ್ನು ಗಮನಿಸಿದ, ಹಸಿವು ಮುಕ್ತ ಸ್ವತಂತ್ರ್ಯ, ಭಯ ಮುಕ್ತ ಸ್ವತಂತ್ರ್ಯ ಎಂಬ ಉದಾತ್ತ ಧೈಯವಾಕ್ಯದೊಂದಿಗೆ ಹೋರಾಟದ ಕಿಚ್ಚನ್ನು ಹಚ್ಚುವುದರ ಮೂಲಕ ಸಮಾಜಕ್ಕೆ ಪರಿಚಯವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿರುವ ರಾಜಕೀಯ ಚಳವಳಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿರುವುದು ಸಂತೋಷದಾಯಕ ವಿಚಾರ.
ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿಯು ಸಂತ್ರಸ್ತ ಕುಟುಂಬದ ಪ್ರಥಮ ಭೇಟಿಯ ಸಮಯದಲ್ಲಿ ಕುಟುಂಬಕ್ಕೆ ಸಾಂತ್ವಾನವನ್ನು ನೀಡುತ್ತಾ “ನ್ಯಾಯ ದೊರಕುವವರೆಗೂ ನಿಮ್ಮೊಂದಿಗೆ ನಾವಿದ್ದೇವೆ” ಎಂಬ ಮಾತನ್ನು ಕುಟುಂಬದ ಮುಂದಿಟ್ಟಾಗ, ಕುಟುಂಬವು ಒಂದಲ್ಪ ನಿಟ್ಟುಸಿರು ಬಿಟ್ಟಿತು ಎಂಬುವುದ ಇದೀಗಾಗಲೇ ಸಮಾಜಕ್ಕೆ ತಿಳಿದಿರುವ ವಾಸ್ತವತೆ.
ಪ್ರಕರಣದ ನ್ಯಾಯದ ಈಡೇರಿಕೆಯ ನೇತ್ರತ್ವವನ್ನು ವಹಿಸಿಕೊಂಡ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಯವರು ಎಪ್ರಿಲ್ 4 ರಂದು ಸಂತ್ರಸ್ತ ಕುಟುಂಬದ ಜೊತೆ ಸಂತೆಮರಹಳ್ಳಿಯಿಂದ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ವರೆಗೆ ಸುಮಾರು 17 ಕಿ.ಮೀ ದೂರ ಬೃಹತ್ ಪಾದಯಾತ್ರೆಯನ್ನು ಕೈಗೊಂಡು, ಮೂಲೆಗುಂಪಾಗಿದ್ದ ಪ್ರಕರಣಕ್ಕೆ ಪುನರ್‍ಜನ್ಮವನ್ನು ನೀಡಿ, ಸರಕಾರದ ಗಮನಕ್ಕೆ ತಂದರು. ಆದರೂ ಈ ಬಗ್ಗೆ ಎಚ್ಚೆತ್ತುಕೊಳ್ಳದ ಸರಕಾರದ ನಿರ್ಜೀವ ಧೋರಣೆಯ ಬಗ್ಗೆ ಎಸ್.ಡಿ.ಪಿ.ಐ ಪಕ್ಷವು ಪ್ರತಿಭಟನೆಗೆ ಸಜ್ಜುಗೊಂಡು ರಾಜ್ಯ ವಿವಿಧ ಪ್ರಗತಿಪರರು ಹಾಗೂ ಚಿಂತಕರೊಂದಿಗೆ ಜೊತೆಗೂಡಿ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿ ನಡೆಸಿತು. ಇತ್ತ ಮಾಧ್ಯಮಗಳಲ್ಲೂ ಚರ್ಚೆಗಳು ಪ್ರಾರಂಭಗೊಂಡಿದೆ, ಸರಕಾರವು ಎಚ್ಚೆತ್ತುಕೊಳ್ಳುವ ಅನಿವಾರ್ಯತೆಗಳಿವೆ. ಎಸ್.ಡಿ.ಪಿ.ಐ ಯೂ ಕುಟುಂಬದ ಪರ ವಿವಿಧ ಹಕ್ಕೊತ್ತಾಯಗಳನ್ನು ಸರಕಾರಕ್ಕೆ ಸಲ್ಲಿಸಿದೆ. ಸಂತ್ರಸ್ತ ಕುಟಂಬಕ್ಕೆ ನ್ಯಾಯ ದೊರಕಲಿ ಎಂದು ಬೇಡಿಕೊಳ್ಳುತ್ತಾ, ಎಸ್.ಡಿ.ಪಿ.ಐ ಯ ನ್ಯಾಯ ಯುತ ಹೋರಾಟವು ಸರಕಾರದ ಕಣ್ಣು ತೆರಸಲಿ.
-ರಿಲ್ವಾನ್ ಹುಸೈನ್ ವಳಾಲ್