Saturday 12 March 2016

ಸರಕಾರದ ಟಿಪ್ಪು ಜಯಂತಿ: ಕಂಬಿಯೊಳಗೆ ಬಂಧಿಯಾದ ಅಮಾಯಕರು

     
ಕರ್ನಾಟಕದ ರಾಜ್ಯದ ಮಾನ್ಯ ಸಿ.ಎಂ ಸಿದ್ದರಾಮಯ್ಯರವರ ನೇತೃತ್ವದ ಸರಕಾರವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ತನ್ನ ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟು, ರಣರಂಗದಲ್ಲಿ ವೀರ ಮರಣವನ್ನಪ್ಪಿದ, ಅಪ್ಪಟ ದೇಶ ಪ್ರೇಮಿ ಶಹೀದ್ ಟಿಪ್ಪು ಸುಲ್ತಾನರ ರ.ಅ ಜನ್ಮ ದಿನವನ್ನು ಆಚರಿಸುವುದಕ್ಕಾಗಿ ವರ್ಷದ ನವೆಂಬರ್ 10ರ ದಿನವನ್ನು “ಟಿಪ್ಪು ಜನ್ಮ ಜಯಂತಿ ದಿನ” ಎಂಬ ಹೆಸರಿನಲ್ಲಿ ಘೋಷಿಸಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹವಾಗಿದೆ.
          ಟಿಪ್ಪು ಜನ್ಮ ದಿನವನ್ನು ರಾಜ್ಯದ ಸರ್ವ ಜನತೆಯು ಸಂಭ್ರಮ ಸಡಗರದಿಂದ ಆಚರಿಸಬೇಕಾಗಿದ್ದು ಮತ್ತು ಟಿಪ್ಪು ಸುಲ್ತಾರು ಈ ದೇಶಕ್ಕೆ ಕೊಟ್ಟ ಕೊಡುಗೆ ಮತ್ತು ಇತಿಹಾಸವನ್ನು ಕಟ್ಟಕಡೆಯ ಜನತೆಗೂ ತಲುಪಿಸುವಂತಹ ಕೆಲಸಗಳು ಸರಕಾರದಿಂದ ಆಗಬೇಕಿತ್ತು.  ಆದರೆ ವಿಪರ್ಯಾಸವೆಂದೇ ಹೇಳಬಹುದು ಟಿಪ್ಪು ಸುಲ್ತಾನರ ಜನ್ಮ ಜಯಂತಿಯು ಕೇವಲ ಅಲ್ಪಸಂಖ್ಯಾತರಾದ ಮುಸಲ್ಮಾನರಿಗೆ ಮಾತ್ರ ಮೀಸಲಿಟ್ಟಿದ್ದು.
         ಸರಕಾರದ ಟಿಪ್ಪು ಜಯಂತಿಯ ನೆಪದಲ್ಲಿ ಕರಾಳ ಜಯಂತಿಯನ್ನು ಆಚರಿಸಿದವರು ಈ ರಾಜ್ಯದ ಅಲ್ಪಸಂಖ್ಯಾತರು ಎಂಬುವುದು ಸ್ಪಷ್ಟ. ಟಿಪ್ಪು ಜಯಂತಿ ಸಂದರ್ಭದಲ್ಲಿ ಕೊಡಗಿನಲ್ಲಿ ನಡೆದ ಘಟನೆಯ ಬಗ್ಗೆ ಅವಲೋಕಿಸುವಾಗ ಸರಕಾರವು ಟಿಪ್ಪು ಸುಲ್ತಾನರ ಜಯಂತಿಯನ್ನು ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಾಗಿಸಿದೆ ಎಂದು ಕಾಣುತ್ತಿದೆ. ಯಾಕೆಂದರೆ ಕೊಡಗಿನಲ್ಲಿ ಸರಕಾರದ ವತಿಯಿಂದಲೇ ನಡೆದ ಟಿಪ್ಪು ಜಯಂತಿಯಲ್ಲಿ ದೇಶದ್ರೋಹಿಗಳು ನಡೆಸಿದ ಕುಕೃತ್ಯಗಳಿಂದ ಕರಾಳ ದಿನವನ್ನು ಎದುರಿಸುತ್ತಿರುವವರು ಕೊಡಗಿನ ಅಮಾಯಕ ಮುಸಲ್ಮಾನರು. ಜೈಲಿನೊಳಗೆ ಬಂಧಿಯಾಗಿ ದಿನಗಳನ್ನು ಕಣ್ಣೀರಿನೊಂದಿಗೆ ಮುಂದೂಡುತ್ತಿದ್ದಾರೆ. ಹರಸಾಹಸಪಟ್ಟು ಸರಕಾರವು ಆಚರಿಸಿದ ಜನ್ಮ ಜಯಂತಿಯೂ ಶಾಹುಲ್ ಹಮೀದ್ ಎಂಬ ಯುವಕನನ್ನು ಹಾಗೂ ಜನ್ಮ ಜಯಂತಿಯನ್ನು ವಿರೋಧಿಸಿ ದೊಂಬಿ ಗಲಭೆಯಲ್ಲಿದ್ದ ಕುಟ್ಟಪ್ಪ ಎಂಬವರ ಸಾವಿಗೆ ಕಾರಣವಾಯಿತು. ಅಂತೂ ಸರಕಾರದ ಆಚರಣೆಯಲ್ಲೂ ಇಲ್ಲಿನ ಜನಸಾಮಾನ್ಯರಿಗೆ ರಕ್ಷಣೆ ಇಲ್ಲವೆಂದು ಕೊಡಗಿನಲ್ಲಿ ತೋರಿಸಿಕೊಟ್ಟಿತು.
       ಸರಕಾರದ ಜಯಂತಿ ಆಚರಣೆಯಿಂದ  ಹಲವಾರು ಅಲ್ಪಸಂಖ್ಯಾತ ಅಮಾಯಕ ಯುವಕರು ಜೈಲಿನ ಕಂಬಿಯನ್ನು ಎಣಿಸುವಂತೆ ಮಾಡಿರುವುದು ಖೇಧಕರ. ಒಂದಷ್ಟು ಯುವಕರು ಜಾಮೀನಿನ ಮೂಲಕ ಹೊರಬಂದರೆ, ತನ್ನ ಮನೆಗಳಿಗೆ ಆಶ್ರಯವಾಗಿದ್ದ ಕೆಲ ಯುವಕರು ಇಂದು ಜೈಲಿನೊಳಗೆ ಸರಕಾರದ ಮಾಡಿದ ತಪ್ಪಿಗಾಗಿ ನೋವನ್ನು ಅನುಭವಿಸುತ್ತಿದ್ದಾರೆ. ಘಟನೆಗೆ ಕಾರಣರಾದವರು ಹಾಯಾಗಿದ್ದಾರೆ.
ಸರಕಾರ ಈ ತರಹದಲ್ಲಿ ಜನ್ಮ ಜಯಂತಿಯನ್ನು ಆಚರಿಸುವುದನ್ನು ಮುಂದುವರಿಸುವುದಾದರೆ, ದಯವಿಟ್ಟು ನಮಿಗೆ ಇಂತಹ ಆಚರಣೆ ಯಾ ಜಯಂತಿಯ ಅವಶ್ಯಕತೆಯಿಲ್ಲ.

     
ಇಲ್ಲಿನ ಅಲ್ಪಸಂಖ್ಯಾತ ಸಮುದಾಯು ಟಿಪ್ಪು ಸುಲ್ತಾರನ ದೇಶಪ್ರೇಮ ಹಾಗೂ ಅವರ ಅಡಳಿತದ ಸಂದರ್ಭ ಜನಸಾಮಾನ್ಯರು ಸೌಹಾರ್ಧತೆಯಿಂದ ಬಾಳಿ ಬೆಳೆದ ಚರಿತ್ರೆಯ ಬಗ್ಗೆ ಆಳ ಅಧ್ಯಯನ ನಡೆಸಿದವರಾಗಿದ್ದಾರೆ ಎಂಬುವುದು ಸತ್ಯ ವಿಚಾರ.