Sunday 16 August 2015

ಕೋಮುವಾದಿ ಹಾಗೂ ಭ್ರಷ್ಟ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದ ಎಸ್.ಡಿ.ಪಿ.ಐ



               ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ಚುನಾವಣೆಯು ಕಾವಿನಿಂದ ಕುದಿಯುತ್ತಿದೆ. ಇತ್ತ ರಾಜಕೀಯ ಪಕ್ಷಗಳ ಡೊಂಬರಾಟ ಜೋರಾಗುತ್ತಿದೆ. ತನ್ನ ಎದುರಾಳಿಯ ಅಪಪ್ರಚಾರವು ಮಿತಿ ಮೀರುತ್ತಿದೆ. ಮತದಾರರನ್ನು ವಂಚಿಸುವ ನಾನಾ ರೀತಿಯ ಭರವಸೆಗಳು ಮುಗಿಲು ಮುಟ್ಟಿದೆ. ಮತದಾರರನ್ನು ಮತಬ್ಯಾಂಕ್‍ಗಳನ್ನಾಗಿ ಪರಿವರ್ತಿಸಿ ದೇಶ ಮತ್ತು ರಾಜ್ಯವನ್ನು ಆಳಿದಂತಹ ರಾಜಕೀಯ ಪಕ್ಷಗಳಿಗೆ ಇತ್ತೀಚಿನ ವರ್ಷಗಳಲ್ಲಿ ಹೋರಾಟದ ಮೂಲಕ ಜನ್ಮ ಪಡೆದು, ಕಳಂಕಿತಗೊಂಡಿರುವ ರಾಜಕೀಯ ಕ್ಷೇತ್ರವನ್ನು ಶುಚಿಗೊಳಿಸುವತ್ತಾ ಪಣತೊಟ್ಟು, ಸರ್ವರಿಗೂ ಸಮಪಾಲು-ಸಮಬಾಳು ಮತ್ತು ಸಮಾನ ನ್ಯಾಯಗಳಿರುವ ಸುಂದರ, ಸುಭದ್ರ ರಾಷ್ಟ್ರ ನಿರ್ಮಾಣದ ಕನಸಿನ ಗೋಪುರದೊಂದಿಗೆ “ನಮ್ಮ ರಾಜಕೀಯ ಉಧಾತ್ತ ಮೌಲ್ಯಗಳಿಗಾಗಿ, ವೃತ್ತಿಗಾಗಿ ಅಲ್ಲ” ಎಂಬ ಘೋಷಣೆಯೊಂದಿಗೆ ಹಾಗೂ ಹಸಿವು ಮುಕ್ತ, ಭಯ ಮುಕ್ತವಾದ ಸಮಾಜ ನಿರ್ಮಾಣದ ಗುರಿಯೊಂದಿಗೆ ದೃಢ ಹೆಜ್ಜೆಯನ್ನಿಟ್ಟು ತಳಮಟ್ಟದಿಂದಲೇ ಬಲಿಷ್ಟವಾಗಿ ಕಾರ್ಯಕರ್ತರನ್ನು ರೂಪಿಸಿಕೊಂಡು, ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸಂಚಲನವನ್ನು ಮೂಡಿಸಿ, ಇತರ ಚುನಾವಣಾ ರಾಜಕೀಯ ಪಕ್ಷಗಳಿಗೆ ತಲೆ ನೋವಾಗಿ ಪರಿಣಮಿಸಿದ ದೇಶದ ಏಕೈಕ ರಾಜಕೀಯ ಚಳುವಳಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ).
ಅಲ್ಪಸಂಖ್ಯಾತ, ದಮನಿತ, ಹಿಂದುಳಿದ, ಶೋಷಿತ ವರ್ಗದ ಆಶಾಕಿರಣವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಧಮನಕ್ಕೊಳಗಾದಂತಹ ಜನಸಾಮಾನ್ಯರ ಧ್ವನಿಯಾಗಿ ರಾಷ್ಟ್ರಾದ್ಯಂತ ಹೋರಾಟದ ಮುಂಚೂಣಿಯಲ್ಲಿರುವುದು ಪ್ರಶಂಸನೀಯ.ರಾಜಕೀಯವನ್ನು ಸಮಾಜ ಸೇವೆಯ ಬದಲಾಗಿ ತನ್ನ ವೃತ್ತಿಯಾಗಿ ಬಳಸಿಕೊಂಡಿರುವ ಜನಪ್ರತಿನಿಧಿಗಳು ಜನಸಾಮಾನ್ಯರ ಸುಖ-ದುಃಖ ವನ್ನು ಅರ್ತೈಸಿಕೊಳ್ಳಲು ವ್ಯರ್ತವಾಗಿದ್ದಾರೆ ಎಂಬುವುದು ಕಟು ಸತ್ಯ.
             ಬದಲಾವಣೆಯು ಅಗತ್ಯ ಮಾತ್ರವಲ್ಲ ಅನಿವಾರ್ಯವು ಕೂಡ ಹೌದು, ಕಳೆದ ಬಿ.ಬಿ.ಎಂ.ಪಿ ಚುನಾಣೆಯಲ್ಲಿ ಆರಿಸಿ ಕಳುಹಿಸಿದಂತಹ ಜನಪ್ರತಿನಿಧಿಗಳ ಅಭಿವೃದ್ಧಿಯಿಂದ ರೋಸಿ ಹೋದ ಜನಸಾಮಾನ್ಯರ ಪರವಾಗಿ, ಜನಪರ ಕಾಳಜಿ ಮತ್ತು ಜನಪರ ಹೋರಾಟದ ಹಿನ್ನಲೆಯುಳ್ಳಂತಹ ಮತ್ತು ಅತ್ಯಂತ ಸ್ಪಷ್ಟ ದೃಷ್ಠಿಕೋನ, ಇಚ್ಚಾಶಕ್ತಿ ಇರುವ 18 ಅಭ್ಯರ್ಥಿಗಳನ್ನು  ಎಸ್.ಡಿ.ಪಿ.ಐ ಎಂಬ ರಾಜಕೀಯ ಚಳುವಳಿಯು “ಭ್ರಷ್ಟಾಚಾರ ಮುಕ್ತ, ಜನಪರ ಕಾರ್ಪೋರೇಟರ್” ಎಂಬ ಸಂದೇಶದೊಂದಿಗೆ ಚುನಾವಣಾ ಅಖಾಡಕ್ಕಿಲಿಸಿದೆ.
ರಾಜಕೀಯ ಅಖಾಡದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೊಸ್ಕರ ಸರ್ವ ರೀತಿಯಲ್ಲೂ ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವಂತಹ ತಮ್ಮ ಎಂದಿನ ಕಾಯಕವನ್ನು ಇತರ ಪಕ್ಷಗಳು ಪ್ರಾರಂಬಿಸತೊಡಗಿದೆ. ತಮ್ಮ ಎಂದಿನ ಕಾಯಕ್ಕೆ ಬಲಿಯಾಗುವವರು ಜನಸಾಮಾನ್ಯರು ಎಂಬುವುದು ಸ್ಪಷ್ಟ. 
ಈ ದೇಶದ ರಾಜಕೀಯ ಪಕ್ಷಗಳ ನೈಜ ಮುಖವಾಡವನ್ನು ದೇಶದ ಇತಿಹಾಸವೇ ನಮಗೆ ಸ್ಪಷ್ಟವಾಗಿ ತಿಳಿಸುತ್ತಿದೆ. ಆದರಿಂದ ತಮ್ಮ ಅತ್ಯಮೂಲ್ಯವಾದ ಮತವನ್ನು ಹೆಂಡ, ಸೀರೆ, ಹಣಕ್ಕಾಗಿ ಮಾರಿಕೊಳ್ಳದೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮತ್ತು , ಪರಸ್ಪರ  ಪ್ರೀತಿ ,ಸ್ನೇಹ, ವಾತ್ಸಲ್ಯದೊಂದಿಗೆ ಜನರೊಂದಿಗೆ ಬೆರೆಯುವ ನೈಜ ಜನಪರ ಕಾಳಜಿಯುಳ್ಳ ವ್ಯಕ್ತಿಯನ್ನು ಈ ಬರುವ ಚುನಾವಣೆಯಲ್ಲಿ ಚುನಾಯಿಸಿ, ಸ್ವಚ್ಚ-ಸುಂದರ ಬೆಂಗಳೂರನ್ನು ನಿರ್ಮಿಸಿ. 

ರಾಜ್ಯ ರಾಜಧಾನಿಯ ಅಭಿವೃದ್ಧಿಗೆ ಒಂದು ಉದಾಹರಣೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ತನಿಸಂದ್ರ ಎಂಬಲ್ಲಿ 71,855 ಜನಸಂಖ್ಯೆ ಇರುವ ಮತ್ತು 65,000 ಮತದಾರರಿರುವ ಬೆಂಗಳೂರಿನ ಅತ್ಯಂತ ದೊಡ್ಡ ವಾರ್ಡ್ ಎಂಬ ಹೆಗ್ಗಳಿಕೆಯನ್ನು ಪಡೆದ ವಾರ್ಡ್.  ಆದರೆ ಇಲ್ಲಿನ ಅವ್ಯವಸ್ಥೆಯನ್ನು ವಿವರಿಸಿ ಬರೆಯಲು ಸಾಧ್ಯವಿಲ್ಲ. ಬಿ.ಬಿ.ಎಂ.ಪಿ ಯ ಅಭಿವೃದ್ಧಿ ರ್ಯಾಂಕಿಂಗ್‍ನಲ್ಲಿ 198 ವಾರ್ಡ್‍ಗಳಲ್ಲಿ ಕೊನೆಯ ಸ್ಥಾನ ಪಡೆದು, ಅಭಿವೃದ್ಧಿ ಸೂಚ್ಯಂಕದಲ್ಲಿ 10ಕ್ಕೆ ಕೇವಲ 2.36 ಅಂಕ ಪಡೆದ ವಾರ್ಡ್ ಎಂಬುವುದು ಕಳೆದ ಚುನಾಯಿತ ಜನಪ್ರತಿನಿಧಿಗಳ ಭೀಕರ ಅಭಿವೃದ್ಧಿಯನ್ನು ಸೂಚಿಸುತ್ತದೆ.
ರಾಶಿ ರಾಶಿ ಬಿದ್ದಿರುವ ಕಸ ಕಡ್ಡಿಗಳು, ನಡೆದಾಡಲೂ ಪರದಾಡುವ ಗುಂಡಿ ಬಿದ್ದ ರಸ್ತೆಗಳು, ಕೊಳಚೆ ತುಂಬಿರುವ ಚರಂಡಿ ಇದೆಲ್ಲವು ಈ ವಾರ್ಡಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿತ್ರಣ. ಕುಡಿಯುವ ನೀರಿನ ಸಮಸ್ಯೆ ಇಲ್ಲಿನ ಬಹುದೊಡ್ಡ ಸಮಸ್ಯೆ. ಹೆಚ್ಚಿನ ಜನರು ಪಡಿತರ ಚೀಟಿಯಿಂದ ದೂರ ಉಳಿದಿದ್ದಾರೆ, ಮತದಾರನ ಗುರಿತಿನ ಚೀಟಿ, ಆಧಾರ್ ಕಾರ್ಡ್, ಆರೋಗ್ಯ ಚೀಟಿ ಯನ್ನು ಶೇ 30% ಪಡೆದಿಲ್ಲ. ಈ ರೀತಿಯ ಸಮಸ್ಯೆಗಳ ಆಗರವೇ ಈ ವಾರ್ಡ್.