Thursday 22 August 2019

ಮೊಸಳೆ: ಪ್ರಾಣಿ ಹಿಂಸೆ

ಮೊಸಳೆಯನ್ನು ಸಾಕುವುದು ಹಿಂಸೆಯೆಂದು ಗೊತ್ತಾದವರಿಗೆ
ಮನುಷ್ಯರನ್ನು ಹತ್ಯೆ ಮಾಡುವುದು ಅಹಿಂಸೆಯಾಗಿ ಕಂಡಿದೆ.
#ವಿಪರ್ಯಾಸ

ಈದ್ ನ ತ್ಯಾಗ

ಸಂಭ್ರಮಿಸಬೇಕಾದದ್ದು ಈದ್.
ಸಂಭ್ರಮವಿಲ್ಲದೆ ಆಚರಿಸಿದ್ದಾರೆ ಎಂದರೆ ಅದೂ ಕೂಡ ತ್ಯಾಗವೇ..
ನೆರೆ ಸಂತ್ರಸ್ತರಿಗೆ ಮಾಡಿದ ತ್ಯಾಗ!

ಈದ್: ಪ್ರವಾಹ ಸಂತ್ರಸ್ತರಿಗೆ ಮಿಡಿದ ನನ್ನೂರ ಹೃದಯ

ಪ್ರವಾಹದಿಂದ ನನ್ನೂರು ಭೀತಿಯನ್ನು ಎದುರಿಸಿತ್ತು, ಕೆಲವರು ಸಂತ್ರಸ್ತರಾಗಿದ್ದಾರೆ.
ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈದ್ ನ ಇಂದು  ರಾಜ್ಯದ ಸಂತ್ರಸ್ತರಿಗೆ ನನ್ನೂರಿನ ಹೃದಯ ಮಿಡಿದಿದೆ.

ಪ್ರವಾಹ; ಈದ್ ಆಚರಣೆ

ಭೀಕರ ಮಳೆಯ ಪ್ರವಾಹದಿಂದ ಸಂತ್ರಸ್ತರಾದ ಜನತೆಗೆ ನೆರವಾಗುವ ಮೂಲಕ ಈದ್ ಆಚರಿಸೋಣ.
ಈದ್ ಮುಬಾರಕ್

ನನ್ನೂರ ತೂಗು ಸೇತುವೆ

ನನ್ನೂರಿನ ಸೌಂದರ್ಯ ಹೆಚ್ಚಿಸಿದ 'ತೂಗು ಸೇತುವೆ' ನಿನ್ನೆವರೆಗೂ ನಮ್ಮೊಂದಿಗಿತ್ತು. ಇಂದು ನೇತ್ರಾವತಿ ಮಾತ್ರವಿದೆ. ಕಣ್ಣೀರು ಮಿಶ್ರಿತಗೊಂಡ ನೀರು ಒಂದಷ್ಟು ಹೆಚ್ಚೇ ಶಕ್ತಿಯುತವಾಗಿತ್ತು.

ನನ್ನೂರ ಪ್ರವಾಹ

ನನ್ನೂರು ಅಕ್ಷರಶಃ ಮುಳುಗಡೆಯ ಭೀತಿಯಲ್ಲಿತ್ತು. ಜೀವನದಿ ನೇತ್ರಾವತಿಗೆ ನಮ್ಮ ಪ್ರಾರ್ಥನೆ ಕೇಳಿದೆ. ಸಮಾಧಾನಪಡಿಸಿಕೊಂಡು ನಮ್ಮೊಂದಿಗೆ ಕರುಣೆ ತೋರಿದೆ. ನನ್ನೂರ ಯುವಕರ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯ. ಹಲವಾರು ಪರಿಹಾರದ ಕರೆಗಳು ತಡ ರಾತ್ರಿ ಕೂಡ ನಮ್ಮೊಂದಿಗಿತ್ತು. ಭೀಕರ ಮಳೆಯಿಂದಾದ ನೆರೆಗೆ ಸಮಾಜದಲ್ಲಿನ ಹೃದಯ ವೈಶಾಲ್ಯತೆಯನ್ನು ತೋರಿಸಿದೆ.
ಸದ್ಯ ನನ್ನೂರು ನಿಟ್ಟುಸಿರು ಬಿಟ್ಟಿದೆ.

Thursday 8 August 2019

ಬಿದ್ದ ಸರಕಾರ; ಎದ್ದು ನಿಲ್ಲದೆ?

ಈ ಬಿದ್ದ ಸರಕಾರ
ಎದ್ದು ನಿಲ್ಲಲು
ಎಷ್ಟು ವರ್ಷಗಳು
ಬೇಕಾಗಬಹುದು?
ರಾಜಕೀಯ ತಜ್ಞರು ಸ್ವಲ್ಪ ಮಾಹಿತಿ ಕೊಡಿ ಪ್ಲೀಸ್.

(ಯಡಿಯೂರಪ್ಪ ಅಧಿಕಾರ ಹಿಡಿದು ಹಲವು ದಿನಗಳು ಕಳೆದರೂ ರಾಜ್ಯದಲ್ಲಿ ಸಂಪುಟ ರಚಿಸದೇ ಇರುವ ಬಗ್ಗೆ)