Monday 23 March 2015

ಎತ್ತಿನ ಹೊಳೆ

                           ಎತ್ತಿನ ಹೊಳೆ ಯೋಜನೆಯು ಖಂಡನೀಯವಾಗಿದ್ದು ಹಾಗೂ ಇದರಿಂದ ಕೆಲವೊಂದು ರಾಜಕೀಯ ಶಕ್ತಿಗಳು ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿರುವುದು ಅದಕ್ಕಿಂತಲೂ ಅತ್ಯಂತ ಖಂಡನಾರ್ಹವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿಡೀ ಚರ್ಚೆಯಲ್ಲಿರುವ ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರವು ಶಂಕುಸ್ಥಾಪನೆ ನೇರೆವೇರಿಸಿ ರಾಜ್ಯದಲ್ಲಿಡಿ ಒಂದು ರೀತಿಯ ಕೋಲಾಹಲವನ್ನೆ ಎಬ್ಬಿಸಿದೆ. ಯೋಜನೆಗೆ ಶಂಕುಸ್ಥಾಪನೆ ನೇರೆವೇರಿಸಿದ ದಿನವನ್ನು ದ.ಕ ಜಿಲ್ಲೆಯಲ್ಲಿ ಕರಾಳ ದಿನವಾಗಿ ವ್ಯಾಪಾರ, ವ್ಯವಹಾರವನ್ನು ಸ್ಥತಗಿಸಗೊಳಿಸಿ ಬಂದ್‍ಗೆ ಸಹಕರಿಸಿದ್ದು ನಿಜಕ್ಕೂ ಅತ್ಯಂತ ಸಂತೋಷದಾಯಕ ವಿಚಾರ. ಆದರೆ ಕೇವಲ ಒಂದು ದಿನವನ್ನು ಕರಾಳ ದಿನವೆಂದು ಜಿಲ್ಲೆಯಾದ್ಯಂತ ಬಣ್ಣಿಸುವ ಮೂಲಕ ಯೋಜನೆಯನ್ನು ಸರಕಾರವು ಕೈಬಿಡಬಹುದು ಎಂಬ ಅಲೋಚನೆ ನಿಮ್ಮದಲ್ಲಿದ್ದರೆ ಅದು ಶುಧ್ಧ ತಪ್ಪು. ಯಾಕೆಂದರೆ ಒಂದು ಕಡೆಯಲ್ಲಿ ಕುಡಿಯಲೂ ನೀರಿಲ್ಲದೆ ಹರಸಾಹಸ ಪಡುತ್ತಿರುವ ಕೋಲಾರ ಹಾಗೂ ಘಟ್ಟ ಪ್ರದೇಶದ ಜನತೆ ಆತ್ಮಹತ್ಯೆಯ ಬೆದರಿಕೆಯನ್ನು ರಾಜ್ಯ ಸರಕಾರದ ಮುಂದಿಟ್ಟಿರುವಾಗ ದ.ಕ ಜಿಲ್ಲೆಯ ಹೋರಾಟ ಕಪೋಲಕಲ್ಪಿತವಾಗಿದೆ. ಒಂದು ದಿನದ ಪೂರ್ತಿ ವ್ಯಾಪರ, ವ್ಯವಹಾರವನ್ನು ಬದಿಗೊತ್ತಿ ಅದರಿಂದ ಸರಕಾರಕ್ಕೆ ಎಚ್ಚರಿಕೆಯ ಮಾತುಗಳನ್ನು ನೀಡಿದರೆ ನನ್ನಭಿಪ್ರಾಯ ಪ್ರಕಾರ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.  ಯಾಕೆಂದರೆ, ಇದಕ್ಕಿಂತ ಮೊದಲು ಅದೆಷ್ಟೋ ಸಲ ಜಿಲ್ಲೆಯನ್ನು ಬಂದ್ ಮಾಡಿಸಿ ಪ್ರತಿಭಟಿಸಿದ ನಿದರ್ಶನಗಳು ನಮ್ಮ ಮುಂದಿದೆ. ಆದರೆ ಇದರಿಂದ ಜಿಲ್ಲೆಯು ಪಡೆದಂತಹ ಪರಿಹಾರ ಶೂನ್ಯ. 
                ಹೋರಾಟವು ಕೇವಲ ಇಂತಿಷ್ಟೇ ದಿನಗಳಿಗೆ ಮಾತ್ರ ಸೀಮಿತಗೊಳ್ಳದೆ ನಿರಂತರವಾಗಿ ಮುಂದುವರಿಯುವುದಾದರೆ ಒಂದು ದಿನ ವಿಜವು ಕಟ್ಟಿಟ್ಟ ಬುತ್ತಿ ಎಂಬುವುದು ನಾವೆಲ್ಲರೂ ಹಿಂದಿನಿಂದಲೂ ತಿಳಿದಂತಹ ಸತ್ಯದ ವಿಚಾರ. ಜನಸಾಮಾನ್ಯರಿಗೆ ತಿಳಿಯದಂತಹ ರಾಜಕೀಯ ಕುತಂತ್ರಗಳು ಇದರ ಹಿಂದೆ ನಿರಂತರವಾಗಿ ನಡೆಯುತ್ತಿವೆ. ಹಾಗು ಮುಂಬರುವ ಲೋಕಸಭೆ ಚುನಾವಣೆಗೆ ಜನತೆಯನ್ನು ‘ಕುರಿ’ಗಳಂತೆ ಮಾಡುವ ಷಡ್ಯಂತ್ರವು ಇದರ ಹಿಂದೆ ಅಡಕವಾಗಿದೆ. ಇದೇನಿದ್ದರು ಜನತೆಯ ಕಷ್ಟವನ್ನು ಅರಿತು ಸ್ವಚ್ಚ ಮನಸ್ಸಿನಿಂದ ಕಿಚ್ಚು ಹಚ್ಚಿದರೆ ಮಾತ್ರ  ಯಶಸ್ವಿ ಕಾಣಬಹುದು.
                    ದ.ಕ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಗೆ ಉಪಯುಕ್ತಕಾರಿಯಾಗುವಂತಹ ಯೋಜನೆಯನ್ನು ರೂಪಿಸಿ ಎಲ್ಲಾ ಜನತೆಯು ಸಹಬಾಳ್ವೆಯಿಂದ ಜೀವಿಸುವಂತಹ ಅವಕಾಶವನ್ನು ಸರಕಾರ ಕಲ್ಪಿಸಿಕೊಡಬೇಕಾಗಿ ಅತೀ ವಿನಯದಿಂದ ಕೇಳಿಕೊಳ್ಲುತ್ತೀದ್ದೇನೆ.

ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳೆರಡು ವಿದೇಶಿ ಮೂಲದ್ದೆಂದು ಬೊಬ್ಬೆ ಹೊಡೆಯುವ ಸಂಘ ಪರಿವಾರದ ಮನುವಾದಿಗಳಿಗೆ ತಮ್ಮ ಬ್ರಾಹ್ಮಣ ಧರ್ಮ ಮತ್ತು ತಾವು ವಿದೇಶಿ ಮೂಲದವರೆಂದು ತಿಳಿದಿಲ್ಲವೇ?

ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳೆರಡು ವಿದೇಶಿ ಮೂಲದ್ದೆಂದು ಬೊಬ್ಬೆ ಹೊಡೆಯುವ ಸಂಘ ಪರಿವಾರದ ಮನುವಾದಿಗಳಿಗೆ ತಮ್ಮ ಬ್ರಾಹ್ಮಣ ಧರ್ಮ ಮತ್ತು ತಾವು ವಿದೇಶಿ ಮೂಲದವರೆಂದು ತಿಳಿದಿಲ್ಲವೇ?

   ಭಾರತದ ಸಂವಿಧಾನ ಸರ್ವರಿಗೂ, ಸರ್ವಧರ್ಮೀಯರಿಗೂ ಸಮಾನವಾದ ಹಕ್ಕು, ಅವಕಾಶಗಳನ್ನು ಮತ್ತು ಸಮನ್ವಯತೆಯಿಂದ ಜೀವಿಸವ ಅವಕಾಶವನ್ನು ಮಾಡಿಕೊಟ್ಟಿದೆ. ಪ್ರತಿಯೊಂದು ಧರ್ಮೀಯರಿಗೂ ಅವರ ಸಂಪ್ರದಾಯಗಳನ್ನು ಮತ್ತು ಆಚರಣೆಗಳನ್ನು ನಿರ್ಭೀತಿಯಿಂದ ಆಚರಿಸಲು ಅನುವುಮಾಡಿಕೊಟ್ಟಿದೆ. ಸರ್ವಜಾತಿ ಜನಾಂಗದ ಸಮುದಾಯದವರು ಒಟ್ಟಾಗಿ ಬದುಕುವುದನ್ನು ಭಾರತದಲ್ಲಿ ಮಾತ್ರವೇ ಕಾಣಲು ಸಾಧ್ಯ.
ಸುಮಾರು 700 ವರ್ಷಗಳ ಕಾಲ ಈ ದೇಶವನ್ನು ಆಳಿದ ಮುಸ್ಲಿಂ ರಾಜರು ತಮ್ಮದೇ ಆದಂತಹ ಅಪಾರವಾದ ಕೊಡುಗೆಗಳನ್ನು ಈ ದೇಶಕ್ಕೆ ನೀಡಿದ್ದಾರೆ. ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಅವರಿಗೆ ವಿಫುಲ ಅವಕಾಶಗಳಿದ್ದರೂ ಅವರು ಅಂತಹ ಕೃತ್ಯಕ್ಕೆ ಕೈ ಹಾಕಲಿಲ್ಲ ಯಾಕೆಂದರೆ ಅವರು ಧರ್ಮದ ಅಚಾರ,ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರು. ಶ್ರಮಿಕ ವರ್ಗವಾದ ರೈತರನ್ನು, ಕಾರ್ಮಿಕರನ್ನು ಎಂದೂ ಶೋಷಿಸಲಿಲ್ಲ. ಮುಸ್ಲಿಂ ಧರ್ಮವು ಎಲ್ಲೂ ಅಸ್ಪøಶ್ಯತೆಯನ್ನು ಆಚರಿಸಲಿಲ್ಲ. ಬದಲಾಗಿ ಅಸ್ಪ್ರಶ್ಯರು ಸೇರಿದಂತೆ ಎಲ್ಲಾ ಶೋಷಿತರಿಗೂ ಇಸ್ಲಾಂ ಧರ್ಮದಲ್ಲಿ ಸಮಾನವಾಗಿ ಬಾಳಲು ಅವಕಾಶವನ್ನು ಮಾಡಿಕೊಟ್ಟು, ಶಿಕ್ಷಣ, ಹಕ್ಕು – ಅಧಿಕಾರಗಳನ್ನು ಅವರಿಗೆ ಧಾರೆ ಎರೆದರು. ವೈದಿಕ ಧರ್ಮದಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕುತ್ತಿದ್ದ ಜನರನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಅವರಿಗೆ ಅತ್ಯುನ್ನತವಾದ ಸ್ಥಾನಮಾನವನ್ನು ಇಸ್ಲಾಂ ಕಲ್ಪಿಸಿಕೊಟ್ಟಿದೆ.
ಸ್ವಾಮಿ ವಿವೇಕಾನಂದರು ತಮ್ಮ ಜೀವನ ಚರಿತ್ರೆಯಾದ ‘ಕಂಪ್ಲೀಟ್ ವಕ್ರ್ಸ್’ ಎಂಬ ಕೃತಿಯಲ್ಲಿ ಇಸ್ಲಾಮಿನ ಕುರಿತು ಈ ರೀತಿಯಾಗಿ ಹೇಳಿದ್ದಾರೆ. ಭಾರತದ ಮೇಲೆ ಮಾಡಿದ ಮಹಮ್ಮದೀಯ ಧಾಳಿ ಭಾರತದ ತುಳಿಯಲ್ಪಟ್ಟವರ (ಶೂದ್ರರು) ಮತ್ತು ದರಿದ್ರರ (ದಲಿತರ ) ಪಾಲಿಗೆ ಒಂದು ಮೋಕ್ಷವಾಗಿ ಬಂತು. ಆದ್ದರಿಂದಲೇ ಭಾರತದ ಐವರಲ್ಲಿ ಒಬ್ಬ ಮಹಮ್ಮದೀಯನಾಗಿದ್ದಾನೆ. ಇವೆಲ್ಲವೂ (ಮತಾಂತರ) ಖಡ್ಗ ಮತ್ತು ಅಗ್ನಿಯಿಂದ ಆಯಿತು ಎನ್ನುವುದು ಅತ್ಯಂತ ಹುಚ್ಚುತನವಾಗಿದೆ. ಅವರೆಲ್ಲರೂ ಯಾಕಾಗಿ ಮಾತಾಂತರ ಹೊಂದಿದರು? ಬ್ರಾಹ್ಮಣ ಪುರೋಹಿತರಿಂದ ಹಾಗೂ ಮೇಲ್ವರ್ಣದ ಭೂಮಾಲಿಕರಿಂದ ಸಹಿಸಲಸಾಧ್ಯವಾದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯದಿಂದ ಬಿಡುಗಡೆ ಹೊಂದಲು ಅವರು ಮತಾಂತರವಾದರು. ಇದು ಐತಿಹಾಸಿಕ ಸತ್ಯದ ಮಾತು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಹೇಳಿದಂತೆ ಬೆಳಿಗ್ಗೆ ಅಸ್ಪøಶ್ಯನಾಗಿದ್ದ ದಲಿತನೊಬ್ಬ ಸಾಯಂಕಾಲ ಮುಸ್ಲಿಮನಾಗಿ ಮತಾಂತರ ಹೊಂದಿದರೆ ಅವನು ಕೆರೆ, ಬಾವಿಗಳ ನೀರನ್ನು ಮುಟ್ಟಲು ಹಕ್ಕುದಾರನಾಗುತ್ತಾನೆ. ಅಂದು ಶೂದ್ರರಾಗಿ, ದಲಿತರಾಗಿ ಹಕ್ಕು ಅವಕಾಶಗಳನ್ನು ಕಳೆದುಕೊಂಡು ಬದುಕುತ್ತಿದ್ದ ಶೂದ್ರಾದಿ ದಲಿತರು ಇಂದು ಸಹೋದರತೆಯ ಸಮಾನತೆಯ ಇಸ್ಲಾಂ ಧರ್ಮದಲ್ಲಿ ಒಂದಾಗಿ ಬದುಕುತ್ತಿದ್ದೇವೆ. ಆದರೆ ನಮ್ಮ ಏಳಿಗೆಯನ್ನು ಸಹಿಸಲಸಾಧ್ಯವಾಗದ ಕಳೆದ 3 ಸಾವಿರ ವರ್ಷಗಳಿಂದ ಭಾರತ ದೇಶದ ಗುತ್ತಿಗೆಯನ್ನು ಪಡೆದವರಂತೆ ವರ್ತಿಸುತ್ತಿರುವ ವಿದೇಶಿ ದಾಳಿ ಕೋರ ಆರ್ಯ ಬ್ರಾಹ್ಮಣರು ಇಂದು ಭಾರತದಲ್ಲಿ ತಮ್ಮ ಅಸಮಾನತೆಯ ಜಾತಿವರ್ಣವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕಾಗಿ ಸಮಾನತೆಯನ್ನು ಪ್ರತಿಪಾದಿಸುವ ಯಾವುದೇ ಧಾರ್ಮಿಕತೆಯನ್ನು ಭಾರತದಿಂದ ಮೂಲೋತ್ಪಾದನೆ ಮಾಡಲು ಸಂಚು ಹಾಕುತ್ತಿದ್ದಾರೆ. ಎರಡು ಬಹುದೊಡ್ಡ ಅಲ್ಪಸಂಖ್ಯಾತ ಧರ್ಮವಾದ ಮುಸ್ಲಿಂ ಮತ್ತು ಕ್ರೈಸ್ತ ಧರ್ಮವನ್ನು ವಿದೇಶಿ ಮೂಲದ್ದೆಂದು ಹುಯಿಲೆಬ್ಬಿಸಿ ಆ ಎರಡೂ ಧರ್ಮಗಳಲ್ಲಿ ಇಂದು ಗುರುತಿಸಿಕೊಂಡಿರುವ ಅವರದೇ ಪೂರ್ವಜರಾದ ಶೂದ್ರಾದಿ ದಲಿತರನ್ನು ಆ ಎರಡೂ ಧರ್ಮದ ವಿರುದ್ಧ ಎತ್ತಿಕಟ್ಟಿ ಬ್ರಾಹ್ಮಣಶಾಹಿಗಳು ಮತ್ತೊಮ್ಮೆ ತಮ್ಮ ಮನು ಧರ್ಮಶಾಸ್ತ್ರವನ್ನು ಮರು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. 
ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳೆರಡು ವಿದೇಶಿ ಮೂಲದ್ದೆಂದು ಬೊಬ್ಬೆ ಹೊಡೆಯುವ ಸಂಘ ಪರಿವಾರದ ಮನುವಾದಿಗಳಿಗೆ ತಮ್ಮ ಬ್ರಾಹ್ಮಣ ಧರ್ಮ ಮತ್ತು ತಾವು ವಿದೇಶಿ ಮೂಲದವರೆಂದು ತಿಳಿದಿಲ್ಲವೇ?
ಭಾರತದ ಸಿಂಧೂ ನದಿ ಬಯಲಿನ ನಾಗರಿಕತೆಯನ್ನು ಮತ್ತು ಅಲ್ಲಿದ್ದ ಮೂಲನಿವಾಸಿಗಳಿಗೆ ಧಾರ್ಮಿಕತೆಯನ್ನು ಸಂಪೂರ್ಣ ನಾಶಗೊಳಿಸಿ ತಮ್ಮ ವೈದಿಕ ಧರ್ಮವನ್ನು ಭಾರತದಲ್ಲಿ ಇವರು ಸ್ಥಾಪಿಸಿದ್ದು ವಿಶ್ವಕ್ಕೆ ತಿಳಿದಿರುವ ವಿಷಯ. 
ಬ್ರಾಹ್ಮಣ ಶಾಹಿಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಸರ್ವಸಮಾನತೆಯ ಇಸ್ಲಾಂ ಧರ್ಮದ ಸಹೋದರತೆಯ ಬಾಹುಬಂಧನದಲ್ಲಿ ನಾವೆಲ್ಲ ಇಂದು ನೆಮ್ಮದಿಯಿಂದ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಇಸ್ಲಾಂ ನಮಗೆ ಎಲ್ಲವನ್ನೂ ನೀಡಿದೆ. ಪ್ರವಾದಿ ಮುಹಮ್ಮದ್  ನಬಿ (ಸ.ಅ) ಯವರು ತೋರಿಸಿದ ಏಕದೇವತಾ ಆರಾಧನೆಯ ಆ ವಾತ್ಸಲ್ಯಭರಿತ ಕುರ್‍ಆನ್ ವಾಕ್ಯಗಳನ್ನು ಪಠಿಸುತ್ತಾ ಶಾಂತಿಮಾರ್ಗದಲ್ಲಿ ನಾವಿಂದು ಸಾಗುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕೆಣಕಬೇಡಿ, ಇತ್ತೀಚೆಗೆ ಯಾರೋ ಕೆಲವರು ಕಿಡಿಗೇಡಿಗಳು ಪಾಕಿಸ್ತಾನದ ಜೊತೆಗೆ ಗುರುತಿಸಿ ಭಯೋತ್ಪಾದನೆಯಂತಹ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿರಬಹುದು. ಮತ್ತು ಕೆಲವರು ಗೋವುಗಳನ್ನು ಕದ್ದು ಮಾರುತ್ತಿರಬಹುದು ಮತ್ತೂ ಕೆಲ ಕೆಲಸವಿಲ್ಲದ ಹುಡುಗರು ಪ್ರೀತಿ-ಪ್ರೇಮ ಎಂದು ಕೆಲವೊಂದು ಹಿಂದೂ ಹುಡುಗಿಯರನ್ನು ಮದುವೆ ಯಾಗಿರಬಹುದು ಇದನ್ನೇ ದೊಡ್ಡ ನೆಪವನ್ನಾಗಿಸಿ ಭಯೋತ್ಪಾದಕರು, ಕಳ್ಳಕಾಕರು, ಲವ್‍ಜಿಹಾದಿ ಎಂದು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಾ ಹಿಂದೂಗಳ ಮನಸ್ಸಿನಲ್ಲಿ ವಿಷಬೀಜವನ್ನು ಭಿತ್ತಿ, ಅದರಲ್ಲೂ ನಮ್ಮವರೇ ಆದ ಶೂದ್ರಾದಿ ದಲಿತರನ್ನು ನಮ್ಮ ವಿರುದ್ಧವೇ ಎತ್ತಿಕಟ್ಟುವಂತಹ ನೀಚಕೃತ್ಯವನ್ನು ಸಂಘಪರಿವಾರದ ಬ್ರಾಹ್ಮಣ ಮುಖಂಡರು ಇಂದು ಮಾಡುತ್ತಿದ್ದಾರೆ. ಬ್ರಾಹ್ಮಣ ಶಾಹಿಗಳು ತಮ್ಮ ಸಾಮಾಜಿಕ ಶ್ರೇಷ್ಠತೆಯನ್ನು ಜೀವಂತವಾಗಿರಿಸಲು ಹಾಗೂ ಇನ್ನಷ್ಟು ಸಾವಿರ ವರ್ಷಗಳ ಕಾಲ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ಮತ್ತು ಜನರನ್ನು ಮೌಢ್ಯಕ್ಕೆ ತಳ್ಳಿ ಅವರ ಸಂಪಾದನೆಯನ್ನು ದೋಚಲು ಮತ್ತು ತಮಗೆ ನಿಷ್ಠರಾಗಿರುವ ವ್ಯಕ್ತಿಗಳನ್ನು ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಿ ಸರ್ವಸ್ವವನ್ನು ತಮ್ಮ ಪದತಳದಲ್ಲಿ ಇಡಲು ಬಯಸುತ್ತಿದ್ದಾರೆ. ತಮಗಾಗದವರನ್ನು ರಾಕ್ಷಸರೆಂದು ಪುರಾಣಗಳಲ್ಲಿ ಬಿಂಬಿಸಿದ ಹಾಗೆ ಇಂದು ಬ್ರಾಹ್ಮಣ ಶ್ರೇಷ್ಠತೆಯನ್ನು ಪ್ರಶ್ನಿಸಿದವರನ್ನು ಅಸ್ಪಶ್ಯತೆಯ ಜಾತಿ ಅಸಮಾನತೆಯನ್ನು ವಿರೋಧಿಸಿದ ಜಾತ್ಯಾತೀತ ಪ್ರಗತಿಪರರನ್ನು ಇಂದು ಬಹಿರಂಗವಾಗಿ ದೇಶದ್ರೋಹಿಗಳೆಂದು ಬಿಂಬಿಸುತ್ತಿದ್ದಾರೆ.
ದೇಶದ್ರೋಹಿ ಬ್ರಾಹ್ಮಣ ಶಾಹಿಗಳ ಗುಂಪಾಗಿರುವ ಸಂಘಪರಿವಾರದ ಪ್ರಕಾಶ್ ವೈದಿಕ್, ಇತ್ತೀಚೆಗೆ ಪಾಕಿಸ್ಥಾನದ ಉಗ್ರ ಹಫೀಝ್‍ನನ್ನು ಭೇಟಿಯಾದ ಬಳಿಕ ದೇಶದಲ್ಲಿ ನಡೆಸಿರುವ ದುಷ್ಕøತ್ಯಕ್ಕೆ ಇವರೇ ಆಹ್ವಾನಿಸುತ್ತಿದ್ದರು ಎಂಬುವುದು ಸಾಬೀತಾಗಿದೆ. ರಾಜಕೀಯ ಗದ್ದುಗೆಗಾಗಿ ಇವರ ತಂತ್ರಗಳ ಕಪಟತನ ಬಯಲಾಗಿದೆ. ಇಂದು ಸಂಘ ಪರಿವಾರ ತಮ್ಮ ವಿಷದ ಹಲ್ಲುಗಳನ್ನು ಮತ್ತೊಮ್ಮೆ ಹೊರಚಾಚಿದೆ. ಇತ್ತೀಚೆಗೆ ದೇಶದಾದ್ಯಂತ ಇರುವ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರನ್ನು ಬಲವಂತವಾಗಿ ತಮ್ಮ ಬ್ರಾಹ್ಮಣ (ಹಿಂದೂ) ಧರ್ಮಕ್ಕೆ ಮತಾಂತರಿಸಲು “ಘರ್‍ವಾಪಾಸಿ”ಎನ್ನುವ ದುಸ್ಸಾಹಸ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಘರ್‍ವಾಪಾಸಿ ಎಂದು ಮುಸ್ಲಿಮರ ತಂಟೆಗೆ ಬಂದರೆ ನಿಮಗೆ ಎಚ್ಚರಿಕೆಯ ಮಾತು, ಮುಂದಿನ ದಿನದಲ್ಲಿ ದೇಶದ ಸೌಹಾರ್ಧ ಪ್ರೇಮಿಗಳು  ಮತ್ತೊಮ್ಮೆ ನಿಮ್ಮ ಪಾಲಿಗೆ ಘೋರಿ, ಘಸ್ನಿಗಳಾಗಬೇಕಾಗುತ್ತದೆ. ಅವರಾದರು ನೀವುಗಳು ಅಕ್ರಮವಾಗಿ ಕೂಡಿಟ್ಟ ಶೂದ್ರಾದಿ ದಲಿತರ ಬೆವರಿನ ಸಂಪತ್ತನ್ನು ಮಾತ್ರವೇ ದೋಚಿದರು. ಆದರೆ ನಾವುಗಳೆಲ್ಲರೂ ಒಗ್ಗಟ್ಟಾಗಿ ತಮ್ಮ ಪೂರ್ವಜನ ನೆಲೆಯಾದ ಮಧ್ಯ ಏಷ್ಯಾಕ್ಕೆ ಓಡಿಸಬೇಕಾಗಿ ಬರಬಹುದು. ಬ್ರಾಹ್ಮಣ ಶಾಹಿಗಳೇ ಘರ್ ವಾಪಾಸಿ ಕಾರ್ಯ ನಿಮ್ಮ ಗಂಡಾಂತರಕ್ಕೆ ಕಾರಣವಾಗಬಹುದು ಎಚ್ಚರವಿರಲಿ. 
ನಮಗೆ ಮತ್ತು ಭಾರತದಲ್ಲಿರುವ ಎಲ್ಲಾ ಇತರ ಧರ್ಮಿಯರಿಗೆ ಕೋಮು ಎಂಬ ವಿಷವನ್ನು ಶರೀರವಿಡೀ ಹರಡಿಸಿಕೊಂಡ ಬ್ರಾಹ್ಮಣ ಶಾಹಿಗಳೇ ವಿರೋಧಿಗಳು ಹೊರತು, ಬ್ರಾಹ್ಮಣ ಧರ್ಮದಲ್ಲಿ ಇಂದು ಗುರುತಿಸಲ್ಪಟ್ಟಿರುವ ಶೂದ್ರಾದಿ ದಲಿತರಲ್ಲ. ಅವರು ನಮ್ಮ ಸಹೋದರರೆಂದು ನಿವು ತಿಳಿದಿಡುವುದು ನಿಮ್ಮ ಪಾಲಿಗೆ ಉತ್ತಮವಾಗಿದೆ.
 -ರಿಲ್ವಾನ್ ಹುಸೈನ್ ವಳಾಲ್

ಎತ್ತ ಕಡೆ ಸಮಾಜ? which way is the society going?

ಎತ್ತ ಕಡೆ ಸಮಾಜ?
               ಮುಂದುವರಿಯುತ್ತಿರುವ ಜಗತ್ತಿನಲ್ಲಿ ಜೀವಿಸುತ್ತಿರುವ ನಾವಿಂದು ಸಮಾಜದ ಹಾಗು-ಹೋಗು ಗಳ ಕಡೆ ಗಮನ ಹರಿಸಿದರೆ ಸಮಾಜದ ವಾಸ್ಥವ ಸ್ಥಿತಿಯು ಅತಿ ಭಯಾನಕ ರೂಪವನ್ನು ಪಡೆದಿರುವುದನ್ನು ಕಾಣಬಹುದು. ವಿಪರ್ಯಾಸವೆಂದರೆ ಈ ವಾಸ್ತವ ಸ್ಥಿತಿಯ ಕಡೆ ನಾವಿಂದು ಗಮನ ಹರಿಸದೇ ಇರುವುದು.
ಇಂದು ನಮ್ಮ ಆಚಾರ-ವಿಚಾರ, ಧರ್ಮ, ಸಂಸ್ಕಾರ ಮಾತ್ರವಲ್ಲ ಶಿಕ್ಷಣ ರಂಗದಲ್ಲೂ ಯುವ ಸಮೂಹ ಎಲ್ಲೆ ಮೀರಿ ಮುಂದುವರಿಯುತ್ತಿದೆ. ಬದಲಾವಣೆ ಪ್ರಕೃತಿ ನಿಯಮ ಅದಕ್ಕೆ ಒಗ್ಗಿಕೊಳ್ಳಬೇಕೆಂಬ ಆಧುನಿಕ ವಿಚಾರ ಧಾರೆಯು ಇಂದು ಅವನತಿಗೆ ಕಾರಣ ಎಂಬುವುದು ವೈಯಕ್ತಿಕ ಅಭಿಪ್ರಾಯವಾದರೂ ಅತ್ತ ಕಡೆ ಕಣ್ಣಾಯಿಸಿ ನೋಡಿದಾಗ ಸತ್ಯ ವಿಚಾರವೆಂಬುವುದು ಮನವರಿಕೆಯಾಗಬಹುದು. ಕಾರಣ ಆಧುನಿಕ ಯುವ ಸಮೂಹದಲ್ಲಿ ಶಿಷ್ಠಾಚಾರ, ಶಹಾನುಭೂತಿ, ಹಿರಿಯರಿಗೆ ಗೌರವ ಇವೆಲ್ಲವು ಇಂದು ಕಣ್ಮರೆಯಾಗಿ ಅನಾಚಾರವು ಸ್ವೇಚ್ಚೆಯಿಂದ ಹರಡುತ್ತಿರುವುದು ವಿಷಾದನೀಯ.
ಯುವಜನತೆ ತಮ್ಮ ಜೀವನವದ ಮೌಲ್ಯಗಳನ್ನು, ಮಾನವೀಯತೆಯನ್ನು ಕಳೆದುಕೊಂಡು ಅನಾಚಾರ, ಅತ್ಯಾಚಾರವೆಂಬ ಹೇಯ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಕಾರಣವಾದರು ಯಾರು? ಇಂದಿನ ಶಿಕ್ಷಣ ವ್ಯವಸ್ಥೆಯೇ ಅಥವಾ ಕಳಪೆಯಾಗಿರುವ ಕಾನೂನು ವ್ಯವಸ್ಥೆಯೇ? ಮುಂದುವರಿದು ಯೋಚಿಸಿದರೆ ಹೆತ್ತವರು, ಮನೆ, ಕುಟುಂಬಸ್ಥರು, ಸ್ನೇಹಿತರು, ಸುತ್ತಲ ವಾತಾವರಣ, ಸಮಾಜ ಇವೆಲ್ಲವೂ ಪಾತ್ರದಾರಿಗಳಾಗಿರುವುದು ಕಂಡು ಬರುತ್ತಿದೆ. ಹಾಗಾದರೆ ಅವನತಿಯತ್ತಾ ಸಾಗುವ ಯುವ ಜನಾಂಗವೆಂಬ ಬಹುದೊಡ್ಡ ರತ್ನವನ್ನು ಉನ್ನತಗೊಳಿಸುವ ಯಶಸ್ವೀ ಜೀವನದ ಶಿಷ್ಠಾಚಾರವನ್ನು ಅರಿಯುವುದು ನಮ್ಮ ಹಕ್ಕು.
ಒಂದು ಮಗುವಿಗೆ ಜನ್ಮವಿತ್ತ ತಾಯಿಯು ತನ್ನ ಮಗುವಿನ ಅಲ್ಲಸಲ್ಲದ ಬೇಡಿಕೆಗಳನ್ನು ಇಡೇರಿಸಿದರೆ ವಿವೇಕಪೂರ್ಣವಾಗಿ ಅಂತಹ ಅಬ್ಯಾಸವನ್ನು ಹೊಗಳಾಡಿಸಬೇಕೇ ವಿನಹ ಅನಗತ್ಯ ಪ್ರೀತಿ ವಾತ್ಸಲ್ಯದಿಂದ ಅವರನ್ನು ಲಂಗು ಲಗಾಮಿಲ್ಲದಂತೆ ಬೆಳೆಸಬಾರದು. ಬೆಳೆಸಿದಿರಿ ಎಂದಾದಲ್ಲಿ ಮುಂದೊಂದು ದಿನ ಅದರ ದುಷ್ಪರಿಣಾಮನ್ನು ಎದುರಿಸಬೇಕಾಗಬಹುದು. ವಾಸ್ತವದಲ್ಲಿ ಹೆತ್ತವರ ಕಾಲಾನಂತರ ಅವರ ಸಂಸ್ಕ್ರತಿ, ಪರಂಪರೆ, ಧಾರ್ಮಿಕ ಶಿಕ್ಷಣ, ಏಕದೇವನಾ ಸಂದೇಶವನ್ನು ಜೀವಂತವಾಗಿಡುವ ಮಾಧ್ಯಮ ತಮ್ಮ ಮಕ್ಕಳೇ ಆಗಿರುವರು. ಆದರಿಂದ ಹೃದಯಂಗಮವಾಗಿ ಮಕ್ಕಳಿಗೆ ಎರಡೂ ವಿದ್ಯೆಯನ್ನು ನೀಡುವುದರ ಜೊತೆಗೆ ಅವರಿಗೆ ಸಂಸ್ಕøತಿಯ ಪಾಠವನ್ನು ಕಲಿಸಿ ಅವರ ಉನ್ನತಿಗಾಗಿ ಪ್ರಾರ್ಥಿಸಬೇಕೇ ಹೊರತು ತಮ್ಮಿಂದ ಶಾಪವನ್ನು ತಮ್ಮ ಮಕ್ಕಳು ಎಂದೂ ಗಿಟ್ಟಿಸಿಕೊಳ್ಳಬಾರದು. ಇಂದು ತನ್ನ ಮಗು ಯಾವುದೇ ರೀತಿ ಅನಿಸ್ಲಾಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅವರನ್ನು ಯಾವ ರೀತಿಯಲ್ಲಿ ಸಂತೈಸಬೇಕಿತ್ತೋ ಆ ರೀತಿಯಲ್ಲಿ ಸಂತೈಸದೇ ಅವರ ಮನವೊಲಿಸುವಿಕೆಯಲ್ಲಿ ತಾವುಗಳು ಎಡವಿದ್ದೀರಿ ಎಂದಾಗಿದೆ. ಇದು ತಮ್ಮ ಮಕ್ಕಳ ಮೇಲೆ ವಿಪರೀತ ಪರಿಣಾಮವನ್ನು ಪಡೆಯುತ್ತದೆ ಎಂಬುವುದನ್ನು ಅಲ್ಲೆಗೆಲೆಯುವಂತಿಲ್ಲ.
ಸ್ನೇಹಿತನು ಜೀವನದ ಶೋಭೆ. ತನಗೊಂದು ಸ್ನೇಹಿತನನ್ನು ಆರಿಸುವಾಗ ಬಹಳ ಜಾಗರೂಕರಾಗಿರಬೇಕಾಗಿರುವುದು ಈ ಕಾಲದ ಬೇಡಿಕೆಯಾಗಿದೆ. ಸ್ನೇಹ ಸಂಬಂಧವನ್ನು ಸತ್ಯ ವಿಶ್ವಾಸಿಯೊಂದಿಗಿರಿಸು ಎಂಬುವುದು ಪ್ರವಾದಿ ಸ.ಅ ರವರ ವಚನ. ಸತ್ಯ ವಿಶ್ವಾಸದ ಬೇಡಿಕೆಗಳಿಗೆ ಅನುಗ್ರಹವಾದ ಅಭಿರುಚಿ, ವಿಚಾರ ಹಾಗೂ ಚಟುವಟಿಕೆಗಳಿರುವ ವ್ಯಕ್ತಿಗಳನ್ನೇ ನಾವಿಂದು ಆರಿಸಬೇಕಾಗಿದೆ. ಕಂಡದ್ದೆಲ್ಲವು ತನಗೆ ಬೇಕು ಎಂಬುದನ್ನು ಜೀವನದಲ್ಲಿಡೀ ಹರಡಿಸಿರುವುದರಿಂದ ಇಂದಿನ ಯುವ ಸಮೂಹ ದಾರಿ ತಪ್ಪುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ನಮ್ಮ ಭವಿಷ್ಯವು ಉಜ್ವಳ ರೂಪವನ್ನು ಪಡೆಯುತ್ತಿದೆ ಎಂಬುವುದನ್ನು ಯುವ ಸಹೋದರ ಸಹೋದರಿಯರು ಮರೆತಿರುವುದು ದುರಾದೃಷ್ಟಕರ. ನಮ್ಮ ಜೀವನದಲ್ಲಿ ಅಂದಕಾರ ಕರ್ಗತ್ತಲು ತುಂಬದಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಸಣ್ಣ ಸಣ್ಣ ವಿಚಾರಗಳಲ್ಲಿ ನಾವುಗಳು ಇಂದು ಎಡವುತ್ತಿದ್ದು, ಅದನ್ನು ಸರಿಪಡಿಸದೇ ಹೋಗದಿರುವುದು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ನಾವು ಎಡವುತ್ತೇವೆ ಮಾತ್ರÀವಲ್ಲದೆ ನಾವು ಪ್ರೀತಿಸುತ್ತಿರುವ ಕುಟುಂಬ, ಸಮಾಜವು ನಮ್ಮಿಂದಾಗಿ ದುಷ್ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡು ನಮ್ಮನ್ನು ನಾವೇ ತಿದ್ದಿಕೊಳ್ಳುವ ಅವಶ್ಯಕತೆ ನಮ್ಮ ಮುಂದಿದೆ. ಇಂದು ಸಮಾಜದಲ್ಲಿ ಮಿತಿ ಮೀರುತ್ತಿರುವ ಗೆಳೆಯ ಗೆಳತಿಯರ ಸಂಬಂಧದಿಂದಲೂ ಜಾಗರೂಕರಾಗಿರಬೇಕಾಗಿದೆ. ಯಾಕೆಂದರೆ ಉಪಯೋಗ ಪಡಿಸುವ ಉದ್ದೇಶದಿಂದ ದುರುಪಯೋಗವೇ ಅತ್ಯಧಿಕವಾಗಿ ತಾಂಡವಾಡುತ್ತಿದೆ. ಎಲ್ಲಾ ವಿಚಾರಗಳಲ್ಲೂ ಇತಿ-ಮಿತಿ ಎಂಬುವುದನ್ನು ಪಾಲಿಸಬೇಕಾಗಿರುವುದು ಪ್ರಸಕ್ತ ಸಮಾಜದ ಸಹೋದರ-ಸಹೋದರಿಯರ ಪಾಲಿಗೆ ಅತ್ಯುತ್ತಮವಾಗಿದೆ. ಅನಿಸ್ಲಾಮಿಕತೆಯನ್ನು ಮೈಗೂಡಿಸಿಕೊಂಡು ಪರಲೋಕದ ಬಗ್ಗೆ ಚಿಂತಿಸದೇ ಇರುವುದು ಸಮಾಜಕ್ಕೆ ನಾವು ನೀಡುವ ದುಷ್ಪರಿಣಾಮದ ಕರೆಯಾಗಿದೆ ಎಂಬುವುದನ್ನು ನೆನಪಿಡಬೇಕಾಗಿದೆ.

-ರಿಲ್ವಾನ್ ಹುಸೈನ್ ವಳಾಲ್