Monday 23 March 2015

ಎತ್ತಿನ ಹೊಳೆ

                           ಎತ್ತಿನ ಹೊಳೆ ಯೋಜನೆಯು ಖಂಡನೀಯವಾಗಿದ್ದು ಹಾಗೂ ಇದರಿಂದ ಕೆಲವೊಂದು ರಾಜಕೀಯ ಶಕ್ತಿಗಳು ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿರುವುದು ಅದಕ್ಕಿಂತಲೂ ಅತ್ಯಂತ ಖಂಡನಾರ್ಹವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿಡೀ ಚರ್ಚೆಯಲ್ಲಿರುವ ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರವು ಶಂಕುಸ್ಥಾಪನೆ ನೇರೆವೇರಿಸಿ ರಾಜ್ಯದಲ್ಲಿಡಿ ಒಂದು ರೀತಿಯ ಕೋಲಾಹಲವನ್ನೆ ಎಬ್ಬಿಸಿದೆ. ಯೋಜನೆಗೆ ಶಂಕುಸ್ಥಾಪನೆ ನೇರೆವೇರಿಸಿದ ದಿನವನ್ನು ದ.ಕ ಜಿಲ್ಲೆಯಲ್ಲಿ ಕರಾಳ ದಿನವಾಗಿ ವ್ಯಾಪಾರ, ವ್ಯವಹಾರವನ್ನು ಸ್ಥತಗಿಸಗೊಳಿಸಿ ಬಂದ್‍ಗೆ ಸಹಕರಿಸಿದ್ದು ನಿಜಕ್ಕೂ ಅತ್ಯಂತ ಸಂತೋಷದಾಯಕ ವಿಚಾರ. ಆದರೆ ಕೇವಲ ಒಂದು ದಿನವನ್ನು ಕರಾಳ ದಿನವೆಂದು ಜಿಲ್ಲೆಯಾದ್ಯಂತ ಬಣ್ಣಿಸುವ ಮೂಲಕ ಯೋಜನೆಯನ್ನು ಸರಕಾರವು ಕೈಬಿಡಬಹುದು ಎಂಬ ಅಲೋಚನೆ ನಿಮ್ಮದಲ್ಲಿದ್ದರೆ ಅದು ಶುಧ್ಧ ತಪ್ಪು. ಯಾಕೆಂದರೆ ಒಂದು ಕಡೆಯಲ್ಲಿ ಕುಡಿಯಲೂ ನೀರಿಲ್ಲದೆ ಹರಸಾಹಸ ಪಡುತ್ತಿರುವ ಕೋಲಾರ ಹಾಗೂ ಘಟ್ಟ ಪ್ರದೇಶದ ಜನತೆ ಆತ್ಮಹತ್ಯೆಯ ಬೆದರಿಕೆಯನ್ನು ರಾಜ್ಯ ಸರಕಾರದ ಮುಂದಿಟ್ಟಿರುವಾಗ ದ.ಕ ಜಿಲ್ಲೆಯ ಹೋರಾಟ ಕಪೋಲಕಲ್ಪಿತವಾಗಿದೆ. ಒಂದು ದಿನದ ಪೂರ್ತಿ ವ್ಯಾಪರ, ವ್ಯವಹಾರವನ್ನು ಬದಿಗೊತ್ತಿ ಅದರಿಂದ ಸರಕಾರಕ್ಕೆ ಎಚ್ಚರಿಕೆಯ ಮಾತುಗಳನ್ನು ನೀಡಿದರೆ ನನ್ನಭಿಪ್ರಾಯ ಪ್ರಕಾರ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.  ಯಾಕೆಂದರೆ, ಇದಕ್ಕಿಂತ ಮೊದಲು ಅದೆಷ್ಟೋ ಸಲ ಜಿಲ್ಲೆಯನ್ನು ಬಂದ್ ಮಾಡಿಸಿ ಪ್ರತಿಭಟಿಸಿದ ನಿದರ್ಶನಗಳು ನಮ್ಮ ಮುಂದಿದೆ. ಆದರೆ ಇದರಿಂದ ಜಿಲ್ಲೆಯು ಪಡೆದಂತಹ ಪರಿಹಾರ ಶೂನ್ಯ. 
                ಹೋರಾಟವು ಕೇವಲ ಇಂತಿಷ್ಟೇ ದಿನಗಳಿಗೆ ಮಾತ್ರ ಸೀಮಿತಗೊಳ್ಳದೆ ನಿರಂತರವಾಗಿ ಮುಂದುವರಿಯುವುದಾದರೆ ಒಂದು ದಿನ ವಿಜವು ಕಟ್ಟಿಟ್ಟ ಬುತ್ತಿ ಎಂಬುವುದು ನಾವೆಲ್ಲರೂ ಹಿಂದಿನಿಂದಲೂ ತಿಳಿದಂತಹ ಸತ್ಯದ ವಿಚಾರ. ಜನಸಾಮಾನ್ಯರಿಗೆ ತಿಳಿಯದಂತಹ ರಾಜಕೀಯ ಕುತಂತ್ರಗಳು ಇದರ ಹಿಂದೆ ನಿರಂತರವಾಗಿ ನಡೆಯುತ್ತಿವೆ. ಹಾಗು ಮುಂಬರುವ ಲೋಕಸಭೆ ಚುನಾವಣೆಗೆ ಜನತೆಯನ್ನು ‘ಕುರಿ’ಗಳಂತೆ ಮಾಡುವ ಷಡ್ಯಂತ್ರವು ಇದರ ಹಿಂದೆ ಅಡಕವಾಗಿದೆ. ಇದೇನಿದ್ದರು ಜನತೆಯ ಕಷ್ಟವನ್ನು ಅರಿತು ಸ್ವಚ್ಚ ಮನಸ್ಸಿನಿಂದ ಕಿಚ್ಚು ಹಚ್ಚಿದರೆ ಮಾತ್ರ  ಯಶಸ್ವಿ ಕಾಣಬಹುದು.
                    ದ.ಕ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಗೆ ಉಪಯುಕ್ತಕಾರಿಯಾಗುವಂತಹ ಯೋಜನೆಯನ್ನು ರೂಪಿಸಿ ಎಲ್ಲಾ ಜನತೆಯು ಸಹಬಾಳ್ವೆಯಿಂದ ಜೀವಿಸುವಂತಹ ಅವಕಾಶವನ್ನು ಸರಕಾರ ಕಲ್ಪಿಸಿಕೊಡಬೇಕಾಗಿ ಅತೀ ವಿನಯದಿಂದ ಕೇಳಿಕೊಳ್ಲುತ್ತೀದ್ದೇನೆ.

No comments:

Post a Comment