Monday 23 March 2015

ಎತ್ತ ಕಡೆ ಸಮಾಜ? which way is the society going?

ಎತ್ತ ಕಡೆ ಸಮಾಜ?
               ಮುಂದುವರಿಯುತ್ತಿರುವ ಜಗತ್ತಿನಲ್ಲಿ ಜೀವಿಸುತ್ತಿರುವ ನಾವಿಂದು ಸಮಾಜದ ಹಾಗು-ಹೋಗು ಗಳ ಕಡೆ ಗಮನ ಹರಿಸಿದರೆ ಸಮಾಜದ ವಾಸ್ಥವ ಸ್ಥಿತಿಯು ಅತಿ ಭಯಾನಕ ರೂಪವನ್ನು ಪಡೆದಿರುವುದನ್ನು ಕಾಣಬಹುದು. ವಿಪರ್ಯಾಸವೆಂದರೆ ಈ ವಾಸ್ತವ ಸ್ಥಿತಿಯ ಕಡೆ ನಾವಿಂದು ಗಮನ ಹರಿಸದೇ ಇರುವುದು.
ಇಂದು ನಮ್ಮ ಆಚಾರ-ವಿಚಾರ, ಧರ್ಮ, ಸಂಸ್ಕಾರ ಮಾತ್ರವಲ್ಲ ಶಿಕ್ಷಣ ರಂಗದಲ್ಲೂ ಯುವ ಸಮೂಹ ಎಲ್ಲೆ ಮೀರಿ ಮುಂದುವರಿಯುತ್ತಿದೆ. ಬದಲಾವಣೆ ಪ್ರಕೃತಿ ನಿಯಮ ಅದಕ್ಕೆ ಒಗ್ಗಿಕೊಳ್ಳಬೇಕೆಂಬ ಆಧುನಿಕ ವಿಚಾರ ಧಾರೆಯು ಇಂದು ಅವನತಿಗೆ ಕಾರಣ ಎಂಬುವುದು ವೈಯಕ್ತಿಕ ಅಭಿಪ್ರಾಯವಾದರೂ ಅತ್ತ ಕಡೆ ಕಣ್ಣಾಯಿಸಿ ನೋಡಿದಾಗ ಸತ್ಯ ವಿಚಾರವೆಂಬುವುದು ಮನವರಿಕೆಯಾಗಬಹುದು. ಕಾರಣ ಆಧುನಿಕ ಯುವ ಸಮೂಹದಲ್ಲಿ ಶಿಷ್ಠಾಚಾರ, ಶಹಾನುಭೂತಿ, ಹಿರಿಯರಿಗೆ ಗೌರವ ಇವೆಲ್ಲವು ಇಂದು ಕಣ್ಮರೆಯಾಗಿ ಅನಾಚಾರವು ಸ್ವೇಚ್ಚೆಯಿಂದ ಹರಡುತ್ತಿರುವುದು ವಿಷಾದನೀಯ.
ಯುವಜನತೆ ತಮ್ಮ ಜೀವನವದ ಮೌಲ್ಯಗಳನ್ನು, ಮಾನವೀಯತೆಯನ್ನು ಕಳೆದುಕೊಂಡು ಅನಾಚಾರ, ಅತ್ಯಾಚಾರವೆಂಬ ಹೇಯ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಕಾರಣವಾದರು ಯಾರು? ಇಂದಿನ ಶಿಕ್ಷಣ ವ್ಯವಸ್ಥೆಯೇ ಅಥವಾ ಕಳಪೆಯಾಗಿರುವ ಕಾನೂನು ವ್ಯವಸ್ಥೆಯೇ? ಮುಂದುವರಿದು ಯೋಚಿಸಿದರೆ ಹೆತ್ತವರು, ಮನೆ, ಕುಟುಂಬಸ್ಥರು, ಸ್ನೇಹಿತರು, ಸುತ್ತಲ ವಾತಾವರಣ, ಸಮಾಜ ಇವೆಲ್ಲವೂ ಪಾತ್ರದಾರಿಗಳಾಗಿರುವುದು ಕಂಡು ಬರುತ್ತಿದೆ. ಹಾಗಾದರೆ ಅವನತಿಯತ್ತಾ ಸಾಗುವ ಯುವ ಜನಾಂಗವೆಂಬ ಬಹುದೊಡ್ಡ ರತ್ನವನ್ನು ಉನ್ನತಗೊಳಿಸುವ ಯಶಸ್ವೀ ಜೀವನದ ಶಿಷ್ಠಾಚಾರವನ್ನು ಅರಿಯುವುದು ನಮ್ಮ ಹಕ್ಕು.
ಒಂದು ಮಗುವಿಗೆ ಜನ್ಮವಿತ್ತ ತಾಯಿಯು ತನ್ನ ಮಗುವಿನ ಅಲ್ಲಸಲ್ಲದ ಬೇಡಿಕೆಗಳನ್ನು ಇಡೇರಿಸಿದರೆ ವಿವೇಕಪೂರ್ಣವಾಗಿ ಅಂತಹ ಅಬ್ಯಾಸವನ್ನು ಹೊಗಳಾಡಿಸಬೇಕೇ ವಿನಹ ಅನಗತ್ಯ ಪ್ರೀತಿ ವಾತ್ಸಲ್ಯದಿಂದ ಅವರನ್ನು ಲಂಗು ಲಗಾಮಿಲ್ಲದಂತೆ ಬೆಳೆಸಬಾರದು. ಬೆಳೆಸಿದಿರಿ ಎಂದಾದಲ್ಲಿ ಮುಂದೊಂದು ದಿನ ಅದರ ದುಷ್ಪರಿಣಾಮನ್ನು ಎದುರಿಸಬೇಕಾಗಬಹುದು. ವಾಸ್ತವದಲ್ಲಿ ಹೆತ್ತವರ ಕಾಲಾನಂತರ ಅವರ ಸಂಸ್ಕ್ರತಿ, ಪರಂಪರೆ, ಧಾರ್ಮಿಕ ಶಿಕ್ಷಣ, ಏಕದೇವನಾ ಸಂದೇಶವನ್ನು ಜೀವಂತವಾಗಿಡುವ ಮಾಧ್ಯಮ ತಮ್ಮ ಮಕ್ಕಳೇ ಆಗಿರುವರು. ಆದರಿಂದ ಹೃದಯಂಗಮವಾಗಿ ಮಕ್ಕಳಿಗೆ ಎರಡೂ ವಿದ್ಯೆಯನ್ನು ನೀಡುವುದರ ಜೊತೆಗೆ ಅವರಿಗೆ ಸಂಸ್ಕøತಿಯ ಪಾಠವನ್ನು ಕಲಿಸಿ ಅವರ ಉನ್ನತಿಗಾಗಿ ಪ್ರಾರ್ಥಿಸಬೇಕೇ ಹೊರತು ತಮ್ಮಿಂದ ಶಾಪವನ್ನು ತಮ್ಮ ಮಕ್ಕಳು ಎಂದೂ ಗಿಟ್ಟಿಸಿಕೊಳ್ಳಬಾರದು. ಇಂದು ತನ್ನ ಮಗು ಯಾವುದೇ ರೀತಿ ಅನಿಸ್ಲಾಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅವರನ್ನು ಯಾವ ರೀತಿಯಲ್ಲಿ ಸಂತೈಸಬೇಕಿತ್ತೋ ಆ ರೀತಿಯಲ್ಲಿ ಸಂತೈಸದೇ ಅವರ ಮನವೊಲಿಸುವಿಕೆಯಲ್ಲಿ ತಾವುಗಳು ಎಡವಿದ್ದೀರಿ ಎಂದಾಗಿದೆ. ಇದು ತಮ್ಮ ಮಕ್ಕಳ ಮೇಲೆ ವಿಪರೀತ ಪರಿಣಾಮವನ್ನು ಪಡೆಯುತ್ತದೆ ಎಂಬುವುದನ್ನು ಅಲ್ಲೆಗೆಲೆಯುವಂತಿಲ್ಲ.
ಸ್ನೇಹಿತನು ಜೀವನದ ಶೋಭೆ. ತನಗೊಂದು ಸ್ನೇಹಿತನನ್ನು ಆರಿಸುವಾಗ ಬಹಳ ಜಾಗರೂಕರಾಗಿರಬೇಕಾಗಿರುವುದು ಈ ಕಾಲದ ಬೇಡಿಕೆಯಾಗಿದೆ. ಸ್ನೇಹ ಸಂಬಂಧವನ್ನು ಸತ್ಯ ವಿಶ್ವಾಸಿಯೊಂದಿಗಿರಿಸು ಎಂಬುವುದು ಪ್ರವಾದಿ ಸ.ಅ ರವರ ವಚನ. ಸತ್ಯ ವಿಶ್ವಾಸದ ಬೇಡಿಕೆಗಳಿಗೆ ಅನುಗ್ರಹವಾದ ಅಭಿರುಚಿ, ವಿಚಾರ ಹಾಗೂ ಚಟುವಟಿಕೆಗಳಿರುವ ವ್ಯಕ್ತಿಗಳನ್ನೇ ನಾವಿಂದು ಆರಿಸಬೇಕಾಗಿದೆ. ಕಂಡದ್ದೆಲ್ಲವು ತನಗೆ ಬೇಕು ಎಂಬುದನ್ನು ಜೀವನದಲ್ಲಿಡೀ ಹರಡಿಸಿರುವುದರಿಂದ ಇಂದಿನ ಯುವ ಸಮೂಹ ದಾರಿ ತಪ್ಪುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ನಮ್ಮ ಭವಿಷ್ಯವು ಉಜ್ವಳ ರೂಪವನ್ನು ಪಡೆಯುತ್ತಿದೆ ಎಂಬುವುದನ್ನು ಯುವ ಸಹೋದರ ಸಹೋದರಿಯರು ಮರೆತಿರುವುದು ದುರಾದೃಷ್ಟಕರ. ನಮ್ಮ ಜೀವನದಲ್ಲಿ ಅಂದಕಾರ ಕರ್ಗತ್ತಲು ತುಂಬದಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಸಣ್ಣ ಸಣ್ಣ ವಿಚಾರಗಳಲ್ಲಿ ನಾವುಗಳು ಇಂದು ಎಡವುತ್ತಿದ್ದು, ಅದನ್ನು ಸರಿಪಡಿಸದೇ ಹೋಗದಿರುವುದು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ನಾವು ಎಡವುತ್ತೇವೆ ಮಾತ್ರÀವಲ್ಲದೆ ನಾವು ಪ್ರೀತಿಸುತ್ತಿರುವ ಕುಟುಂಬ, ಸಮಾಜವು ನಮ್ಮಿಂದಾಗಿ ದುಷ್ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡು ನಮ್ಮನ್ನು ನಾವೇ ತಿದ್ದಿಕೊಳ್ಳುವ ಅವಶ್ಯಕತೆ ನಮ್ಮ ಮುಂದಿದೆ. ಇಂದು ಸಮಾಜದಲ್ಲಿ ಮಿತಿ ಮೀರುತ್ತಿರುವ ಗೆಳೆಯ ಗೆಳತಿಯರ ಸಂಬಂಧದಿಂದಲೂ ಜಾಗರೂಕರಾಗಿರಬೇಕಾಗಿದೆ. ಯಾಕೆಂದರೆ ಉಪಯೋಗ ಪಡಿಸುವ ಉದ್ದೇಶದಿಂದ ದುರುಪಯೋಗವೇ ಅತ್ಯಧಿಕವಾಗಿ ತಾಂಡವಾಡುತ್ತಿದೆ. ಎಲ್ಲಾ ವಿಚಾರಗಳಲ್ಲೂ ಇತಿ-ಮಿತಿ ಎಂಬುವುದನ್ನು ಪಾಲಿಸಬೇಕಾಗಿರುವುದು ಪ್ರಸಕ್ತ ಸಮಾಜದ ಸಹೋದರ-ಸಹೋದರಿಯರ ಪಾಲಿಗೆ ಅತ್ಯುತ್ತಮವಾಗಿದೆ. ಅನಿಸ್ಲಾಮಿಕತೆಯನ್ನು ಮೈಗೂಡಿಸಿಕೊಂಡು ಪರಲೋಕದ ಬಗ್ಗೆ ಚಿಂತಿಸದೇ ಇರುವುದು ಸಮಾಜಕ್ಕೆ ನಾವು ನೀಡುವ ದುಷ್ಪರಿಣಾಮದ ಕರೆಯಾಗಿದೆ ಎಂಬುವುದನ್ನು ನೆನಪಿಡಬೇಕಾಗಿದೆ.

-ರಿಲ್ವಾನ್ ಹುಸೈನ್ ವಳಾಲ್


3 comments: