Sunday, 16 July 2017

'ಬೆಂಕಿ' ಕೊಟ್ಟ ಮಾಧ್ಯಮದಿಂದ ವಿಷಾದ

'ಬೆಂಕಿ' ಕವನ ಪ್ರಕಟಿಸಿ
ಬೆಂಕಿ ಹಚ್ಚಿದ್ದ ಪತ್ರಿಕೆ
ವಿಷಾದ ವ್ಯಕ್ತಪಡಿಸಿತು
ಮತೀಯವಾದಿಗಳಿಂದ
'ಹೊತ್ತಿ ಉರಿದ ಜಿಲ್ಲೆ'
ತಲೆ ಬರಹ ನಗುತ್ತಿತ್ತು

ಡೌಟು

ಶೋಭಣ್ಣ ಸಮಾಜಕ್ಕೆ ಬೆಂಕಿ ಕೊಡಲು
ಪ್ರಯತ್ನಿಸಿದಷ್ಟು,
ಮನೆಯಲ್ಲಿರುವ ಓಲೆಗೆ ಬೆಂಕಿ ಕೊಡಲು
ಪ್ರಯತ್ನಿಸಿರಲಿಕ್ಕಿಲ್ಲ

ಕಾಂಗ್ರೆಸ್ ತಿರುಗೇಟು

ಬಿಜೆಪಿ,
ಬೆಂಕಿ ಹಚ್ಚಲಿ,
ನಾವು,
ಚಳಿ ಕಾಯಿಸ್ತೇವೆ..

ಕಾಂಗ್ರೆಸ್ ತಿರುಗೇಟು ನೀಡಿತು

'ಬೆಂಕಿ' ಹಚ್ಚಿದ ಮಾಧ್ಯಮ

'ಬೆಂಕಿ' ಕವನವೊಂದು ಬಂದಿತ್ತಲ್ವಾ.. ಎಲ್ಲಿದೆ?
ಮಾಧ್ಯಮ ಸಂಗಾತಿಗಳೊಂದಿಗೆ ಕೇಳಿದೆ
ಬಂದಾಗಲೇ ಪ್ರಕಟಿಸಿ
ಬೆಂಕಿ ಹಚ್ಚಿಬಿಟ್ಟಿದ್ದೇವೆ ಅಂದರು

ಬಿಜೆಪಿಯ ಅಧಿಕಾರ

ಬಿಜೆಪಿ ಇದುವರೆಗೂ 
ಅಧಿಕಾರ ಪಡೆಯಲು 
ಕಂಡುಕೊಂಡಿದ್ದು,
'ಕೋಮು'ಗಲಭೆ ಮಾತ್ರ

ವ್ಯತ್ಯಾಸ

ನಮಗೂ ನಿಮಗೂ ಇರುವ ವ್ಯತ್ಯಾಸ
ನೀವು, 
ಬೆಂಕಿ ಹಚ್ಚುವವರು
ನಾವು, 
ನಂದಿಸುವವರು

#BJPStopHatePolitics

ಬಿಜೆಪಿ ಯ ಬೆಂಕಿ ಹಚ್ಚುವಿಕೆ: ಗುಲ್ಬಾರ್ಗಾದಿಂದ ಚಾಲನೆ

ಬಿಜೆಪಿ ಯ ಬೆಂಕಿ ಹಚ್ಚುವ ಸಂಸ್ಕೃತಿಗೆ
ಇತ್ತೀಚೆಗೆ ಗುಲ್ಬಾರ್ಗದಿಂದ ಅಧಿಕೃತ ಚಾಲನೆ ನೀಡಲಾಗಿದೆ..
ಹೊತ್ತಿಸಲು ಎಣ್ಣೆ ಸರಬರಾಜು ಮಾಡುವ ಮಾಧ್ಯಮವು
ಹೊತ್ತಿಸಿದ ತಕ್ಷಣವೇ ನಂದಿಸಿ ಹಾಕಿದೆ..
ಬೆಂಕಿಯಿಂದ ನರಳಿ ನೂರ್
ಎಂಬ ಬಡ ಜೀವವು ಕೊನೆಯುಸಿರೆಳೆದಿದೆ..
ಅಲ್ಲಾಹುಮ್ಮಘ್ಫಿರ್ಲಹು ವರ್ಹಂಹು

ನೈಜ ಮುಖವಾಡ

ಮಾಧ್ಯಮಗಳಲ್ಲಿ 
ಶಾಂತಿಯ ಭೋದನೆ,
ಹೃದಯದಲ್ಲಿ
ಅಶಾಂತಿಯ ಪಾಲನೆ

ಮಾರಕಾಸ್ತ್ರಗಳೊಂದಿಗೆ ಬಿಜೆಪಿ ನಾಯಕ ತೇಜಸ್ವಿ

ಸತ್ಯತೆಯನ್ನು ತೆರೆದಿಟ್ಟ ವಾರ್ತಾಭಾರತಿ

ಸಂಘಪರಿವಾರದ ನೈಜತೆಯನ್ನು
ಬಿಚ್ಚಿಟ್ಟ ವಾರ್ತಾಭಾರತಿಯ
ಫೇಸ್ಬುಕ್ ಪುಟ ಬ್ಲಾಕ್...
ತನ್ನ ವಿರುದ್ಧ 
ಮಾತನಾಡುವವರನ್ನೆಲ್ಲಾ
ಧಮನಿಸುತ್ತಲೇ ಬರುತ್ತಿದೆ
ಈ ಫೇಕ್

ದ್ವಿಮುಖ ಧೋರಣೆಯ ಮಾಧ್ಯಮ

ಚರ್ಚೆಗಳಲಿಲ್ಲ,
ಬ್ರೇಕಿಂಗ್ ನ್ಯೂಸ್ ಗಳಿಲ್ಲ,
ಸ್ಪೋಟಕ ಮಾಹಿತಿಯ ಅಬ್ಬರಗಳಿಲ್ಲ,
ಆರೋಪಿಯ ಬಗ್ಗೆ ಕಲೆ ಹಾಕಲಾದ ಸುದ್ದಿಗಳಿಲ್ಲ
ಮಹತ್ವದ ಸುಳಿವಂತೂ ದೊರೆತೇ ಇಲ್ಲ...
ಹೇಗೆ ದೊರೆಯುವುದು ಸ್ವಾಮಿ..?
ಬೆಂಕಿ ಹಚ್ಚಿ ಕೊಂದಿದ್ದು
ಸಂಘಪರಿವಾರಿಗಳಲ್ವೇ...
ಗುಲ್ಬರ್ಗಾ ದಲ್ಲಿ ಸಂಘಪರಿವಾರಿಗಳಿಂದ ಬೆಂಕಿ ಹಚ್ಚಿ ನೂರುದ್ದೀನ್ ಎಂಬ ಯುವಕನ ಹತ್ಯೆ

ಸುದ್ದಿಯಾಗದ ಸುದ್ದಿ

ಹೆಸರು,ವಿಳಾಸ, ಗುತ್ತು-ಗುರಿ ಇಲ್ಲದ
ಸಾಮಾಜಿಕ ಖಾತೆಯ ಬರಹದ ಬಗ್ಗೆ ತಿಂಗಳಿಡೀ ಚರ್ಚೆ...
ಕೊಚ್ಚು, ಕಡಿ, ಬೆಂಕಿ ಹಚ್ಚು, ಬಟ್ಟೆ ಎತ್ತಿ ನೋಡು, ಶರೀ ಅತ್ತ್,
ಸಾರ್ವಜನಿಕವಾಗಿ ಕೋಮು ಪ್ರಚೋದನೆಯ ಹೇಳಿಕೆ 
ನೀಡುವವನ ಬಗ್ಗೆ ಒಂದು ಸುದ್ದಿಯೂ ಇಲ್ಲ...

ಪತ್ರಿಕೆ v/s ಜನಸಾಮಾನ್ಯರ ವರದಿ

ಪತ್ರಿಕೆ ವರದಿ:
ಫೇಸ್ಬುಕ್, ವಾಟ್ಸಪ್
ಸುಳ್ಳು ಸುದ್ದಿ ಹಬ್ಬಿಸುತ್ತಿದೆ.
ಜನಸಾಮಾನ್ಯರ ವರದಿ:
ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮ
ಕೋಮು ಪ್ರಚೋದಿಸುತ್ತಿದೆ.
ಫೇಸ್ಬುಕ್, ವಾಟ್ಸಪ್ ಇವರ
ನೈಜತೆಯನ್ನು ಬಿಚ್ಚಿಡುತ್ತಿದೆ.

ಘಟನೆಯನ್ನ ತಿರುಚುವ ಮಾಧ್ಯಮ ವರದಿ

ದೊಂಬಿ, ಗಲಭೆಯ ಸಂದರ್ಭ
ಕಲ್ಲುಗಳು ಪತ್ತೆಯಾಗುತ್ತೆ,
ಡಿಸೈನ್ ಗಾಗಿ ಎಂದು ವರದಿಯಾಗುತ್ತೆ
144ಸೆಕ್ಷನ್ ಜಾರಿಯಲ್ಲಿದ್ದಾಗ
ಪ್ರತಿಭಟನೆ ಹೆಸರಲ್ಲಿ ಸಂಭ್ರಮಿಸಲಾಗುತ್ತೆ
ಸಂತಾಪ ಸೂಚಕ ಸಭೆಯೆಂದು ವರದಿಯಾಗುತ್ತೆ
ಶವಯಾತ್ರೆ ಹೆಸರಲ್ಲಿ
ಕೋಮು ಹಿಂಸಾಚಾರ ನಡೆಯುತ್ತೆ
ಶವಯಾತ್ರೆ ಮೇಲೆ ಕಲ್ಲು ತೂರಲಾಗಿದೆಂದು ವರದಿಯಾಗುತ್ತೆ
ಕುಟುಂಬ ಕಲಹದಿಂದ
ಸಂಬಂಧಿಕರಿಂದಲೇ ಕೊಲೆಯಾಗುತ್ತೆ
ಕೋಮುವಾದಿಗಳಿಂದ ಹತ್ಯೆಯೆಂದು ವರದಿಯಾಗುತ್ತೆ
ಜಿಲ್ಲೆಗೆ ಬೆಂಕಿ ಹಾಕ್ತೇವೆ
ಬಹಿರಂಗ ಸವಾಲ್ ಬೀಳುತ್ತೆ
ಅವರ ಪರವಾಗಿಯೇ ವಾದಿಸುತ್ತೆ

'ಜಿಲ್ಲೆಗೆ ಬೆಂಕಿ ಕೊಡ್ತೇವೆ' ಹಿಂದಿರುವ ಅಜೆಂಡಾ

'ಜಲ್ಲೆಗೆ ಬೆಂಕಿ ಕೊಡ್ತೇವೆ' ಎಂಬ ಹಿಂಸಾತ್ಮಕ ಹೇಳಿಕೆ ಹಾಗೂ ಜಿಲ್ಲೆಗೆ ಬಹಿರಂಗ ಬೆದರಿಕೆ ನೀಡಿದ್ದ #notmyMP ನಳಿನ್ ಕುಮಾರ್ ರವರ ಹೇಳಿಕೆಯ ಭಾಗವಾಗಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯೆಂದು ಜಿಲ್ಲೆಯ ಪ್ರತಿಯೊಬ್ಬ ಜನತೆಯು ಅರಿಯದಷ್ಟು ಮುಗ್ದರಲ್ಲ. 
ನಿಮ್ಮ ಮುಗ್ದತೆ, ಅನುಕಂಪ, ಕನಿಕರ ವೆಲ್ಲವು ರಾಜಕೀಯ ಲಾಭ ಪಡೆಯಲೆಂದು ಸ್ಪಷ್ಟವಾಗಿ ಜಿಲ್ಲೆಯ ಜನತೆಗೆ ಅರಿವಾಗಿದೆ. 
ಮಾನ್ಯ ಚುನಾಯಿತ ಪ್ರತಿನಿಧಿಗಳೇ,
ದ್ವೇಷ ರಾಜಕೀಯವನ್ನು ಕೊನೆಗೊಳಿಸಿ.

ಬಾರ್ ಮಾಲಕನಿಂದ ನಿಷೇಧದ ಜಾಗೃತಿ

ಬಾರ್ ಮಾಲಕನೊಬ್ಬ 
ಮದ್ಯ ನಿಷೇಧದ
ಜಾಗೃತಿ ಮೂಡಿಸುತ್ತಿದ್ದಾನೆ.
ಜಾಗೃತಿಯಲ್ಲಿ ಭಾಗವಹಿಸಿದವರೆಲ್ಲಾ
ಅವನದೇ ಬಾರ್ ನಿಂದ 
60, 90 ಹಾಕೊಂಡಿದ್ದಾರೆ.

ಡಿಸೆಂಬರ್ 6: ಸಂವಿಧಾನ ಉರುಳಿ ಬಿದ್ದ ದಿನ

1992 ಡಿಸೆಂಬರ್ 6ರಂದು
ಮಸೀದಿಯೊಂದಿಗೆ
ದೇಶದ ಸಂವಿಧಾನವೂ
ಉರುಳಿ ಬಿದ್ದಿದೆ.

ಕೃಪ್ಣಪ್ರಸಾದತಿವಾರಿ.

ಹುಳಿ ಮುಂಚಿ ಖಾರ
ತಿನ್ನೋ ದೇಹವಲ್ವಾ,
ವಯಸ್ಸಾದರೂ ಆಸೆ ಇರುತ್ತೆ...
ಅನ್ಯತಾ ಬಾವಿಸಬೇಡಿ.ಅದಿಕಾರದ ಆಸೆ

ಪೊಲೀಸ್ ಇಲಾಖೆಯಲ್ಲೊಂದು ರಿಯಲ್ ಸಿಂಗಂ

ವಳಾಲು.. ಅಷ್ಟೇನು ಪರಿಚಿತವಲ್ಲದ ಊರು.. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 78 ರ ಹಾದಿಯಲ್ಲಿ ನೆಲೆಗೊಂಡಿರುವ ಊರು. ಲಕ್ಷಾಂತರ ಮಂದಿಯ ಜೀವನಾಡಿಯಾಗಿರುವ ನೇತ್ರಾವತಿ ನದಿ ದಂಡೆಗೆ ತಾಗಿಕೊಂಡಿರುವ ವಳಾಲೆಂಬ ಊರಿನಲ್ಲಿ ಬಡವರೇ ಹೆಚ್ಚು. ಇಲ್ಲಿನ ಜನರು ನಿತ್ಯ ಕಾಯಕದಲ್ಲಿ ತೊಡಗಿ ಜೀವನದ ಬಂಡಿ ಓಡಿಸುವವರು. ಈ ಊರಿನ ಮಧ್ಯಮ ವರ್ಗದ ಕುಟುಂಬದ ಯುವಕನೇ ಸಲೀಂ ಅಬ್ಬಾಸ್. ಸದ್ಯ ತನ್ನ ಪ್ರಾಮಾಣಿಕ ಮತ್ತು ನಿಷ್ಠಾವಂತ ಸೇವೆಯಿಂದ ಸಲೀಂ ಅಬ್ಬಾಸ್ ಹೆಸರು ಪೊಲೀಸ್ ಇಲಾಖೆಯಲ್ಲಿ ಚಿರಪರಿಚಿತ..
ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರಾಗಿ ಚಿಕ್ಕಮಗಳೂರಿನ ನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಲೀಂ ಅಬ್ಬಾಸ್ ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ಅಪರಾಧ ದಾಖಲೆ ಬ್ಯೂರೋ ( DCRB ) ಪೊಲೀಸ್ ಇನ್ಸ್ಪೆಕ್ಟರಾಗಿ ಬಡ್ತಿ ಹೊಂದಿದ್ದಾರೆ. ಯಾವುದೇ ಗಾಡ್ ಫಾದರ್ ಗಳಿಲ್ಲದೆ ತನ್ನ ಸ್ವಂತ ಪರಿಶ್ರಮದಿಂದ ಉನ್ನತಿ ಕಂಡ ಯುವಕ ಸಲೀಂ ಅಬ್ಬಾಸ್.


ಸಲೀಂ ಅಬ್ಬಾಸ್ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ವಳಾಲಿನ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷರಾಗಿ ಸುದೀರ್ಘ 11ವರ್ಷ ಸೇವೆ ಸಲ್ಲಿಸಿ, ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದ ಎಂ.ಪಿ ಅಬ್ಬಾಸ್ ಹಾಜಿಯವರ ಐದು ಗಂಡು ಮಕ್ಕಳಲ್ಲಿ ಎರಡನೆಯವರು. ಸಲೀಂ ಹುಟ್ಟಿದ್ದು ಉಪ್ಪಿನಂಗಡಿಯಲ್ಲಿ. ಹೆಚ್ಚು ವಿದ್ಯಾಭ್ಯಾಸ ಮಾಡಿದ್ದು ಕೂಡ ಉಪ್ಪಿನಂಗಡಿಯಲ್ಲೇ. ಅಂಗನವಾಡಿಯಿಂದ ಹಿಡಿದು ಬಿ.ಎ ಪದವಿ ತನಕ ಓದಿದ್ದು ಉಪ್ಪಿನಂಗಡಿಯಲ್ಲಿ. ಆದರೆ ಹೆಚ್ಚು ಓಡಾಡಿದ್ದು ವಳಾಲಿನಲ್ಲಿ. ಬೆಳೆದದ್ದು ಹಾಗೂ ಬೆಳವಣಿಗೆ ಕಂಡಿದ್ದು ಕೂಡ ವಳಾಲೆಂಬ ಊರಿನಲ್ಲಿ. ಸಲೀಂ ಅಬ್ಬಾಸ್ ಬಾಲ್ಯದ ಸಮಯದಲ್ಲಿ ಕುಟುಂಬ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿತ್ತು. ಸಲೀಂ ಸಂಕಷ್ಟದ ನಡುವೆಯೂ ಅರಳಿದ ಹೂವೆಂದೂ ತಾಯಿ ಝೋಹರಾ ಅಬ್ಬಾಸ್ ವಿವರಿಸುತ್ತಾರೆ.

ಸಲೀಂ ಬಾಲ್ಯ ಹಾಗೂ ಯವ್ವನದಲ್ಲಿ ಪೋಕಿರಿ, ಆದರೆ ಬುದ್ಧಿವಂತ. ಬಲು ಚೂಟಿ ವಿದ್ಯಾರ್ಥಿ. ಪ್ರಾಥಮಿಕ ಶಾಲೆಯಿಂದ ಹಿಡಿದು ಕಾನೂನು ಪದವಿ ತನಕ ಕೊನೆ ಬೆಂಚಿನ ಬುದ್ಧಿವಂತ ವಿದ್ಯಾರ್ಥಿ ಎಂಬುದು ಆಪ್ತ ಸ್ನೇಹಿತರ ಮಾತು. ಶಾಲಾ ಹಾಗೂ ಕಾಲೇಜು ಜೀವನದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಲೀಂ ಸದಾ ಮುಂದಿದ್ದರು. ಪದವಿ ಹಾಗೂ ಕಾನೂನು ಪದವಿಯನ್ನು ಸಲೀಂ ಪೂರ್ತಿಗೊಳಿಸಿದ್ದು ಉನ್ನತ ಶ್ರೇಣಿಯಲ್ಲಿ. ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಸಲೀಂ ರಾಂಕ್ ವಿದ್ಯಾರ್ಥಿ ಹಾಗೂ ಕಾಲೇಜಿನಲ್ಲಿಯೇ ದ್ವಿತೀಯ ಸ್ಥಾನವನ್ನು ಪಡೆದಿದ್ದರು. ಎರಡು ವಿಷಯಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಹಾಗೂ ನಗದು ಪುರಸ್ಕಾರವನ್ನು ತನ್ನದಾಗಿಸಿಕೊಂಡಿದ್ದಾರೆ . ಕರ್ನಾಟಕ ಪೊಲೀಸ್ ಇಲಾಖೆ ನಡೆಸಿದ PSI ಪರೀಕ್ಷೆಯಲ್ಲಿ merit ನಲ್ಲಿ ಉತ್ತೀರ್ಣರಾಗಿದ್ದರು.

       ಶಾಲಾ- ಕಾಲೇಜು ವ್ಯಾಸಂಗದ ಅವಧಿಯಲ್ಲಿ ಸಲೀಂ ಕಷ್ಟಗಳನ್ನು ಎದುರಿಸಿದ ವಿದ್ಯಾರ್ಥಿ. ಆರ್ಥಿಕ ಸಂಕಷ್ಟಗಳ ನಡುವೆ ವ್ಯಾಸಂಗವನ್ನು ಮಾಡಿದ್ದ ಸಲೀಂ ಕನಸುಗಾರ. ಮುಂದೆ ಏನಾದರೂ ಸಾಧಿಸಬೇಕೆಂದು ವಿದ್ಯಾಭ್ಯಾಸದಲ್ಲಿ ತೊಡಗಿದ್ದ ಛಲವಾದಿಯೂ ಹೌದು.
ಸಲೀಂ ಅಬ್ಬಾಸ್ ಕನಸಿಗೆ ಸಾಥ್ ನೀಡಿದವರು ತಂದೆ ಎಂ.ಪಿ ಅಬ್ಬಾಸ್ ಹಾಜಿ. ಎರಡನೇ ಪುತ್ರ ಸಲೀಂ ತಂದೆಯ ಪ್ರೀತಿಪಾತ್ರ ಮಗ. ಅಪ್ಪನ ಬಾಯಿಂದ ಹೆಚ್ಚು ಬೈಗುಳ ತಿಂದಿದ್ದು ಹಾಗೂ ಕೈಯಿಂದ ಹೆಚ್ಚು ಏಟು ತಿಂದ ಮಗ ಕೂಡ ಸಲೀಮನೇ ಎಂದೂ ಇವರ ಇತರ ಸಹೋದರರು ಹೇಳುವ ಮಾತು. ಇಂದು ಖಾಕಿ ಧರಿಸಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿರಲು ಕಾರಣ ಇವರ ತಂದೆಯವರಾದ ಅಬ್ಬಾಸ್ ಹಾಜಿಯವರೇ ಮುಖ್ಯ ಕಾರಣ ಎಂದು ಸ್ವತಃ ಸಲೀಂ ತನ್ನೆಲ್ಲಾ ಹೇಳಿಕೆಯಲ್ಲಿ ಹೇಳುವ ವಿಚಾರ.

ಎಲ್ಲರಂತೆ ಒಂದು ಕಾಲಕ್ಕೆ ಪೋಕಿರಿಯಾಗಿದ್ದ ಸಲೀಂ ಅಬ್ಬಾಸ್ , ಸದ್ಯ ಪಳಗಿದ ಪೊಲೀಸ್ ಅಧಿಕಾರಿ. ಕರ್ನಾಟಕ ಪೊಲೀಸ್ ಇಲಾಖೆಗೆ ಸೇರಿ ಒಂದು ದಶಕ ಕಳೆದಿದೆ. ಪೊಲೀಸ್ ಸೇವೆಯ ಹತ್ತು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಮಾಡಿರುವ ಸಾಧನೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ.
ಅಂಕೋಲದ ಉದ್ಯಮಿ ಆರ್.ಎನ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚಿದ ಕಾರಣಕ್ಕಾಗಿ ಇಲಾಖೆಯಿಂದ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ಸ್ವೀಕರಿದ್ದಾರೆ. 2015 ರಲ್ಲಿ ರಂಝಾನ್ ಹಬ್ಬದ ಸಂದರ್ಭದಲ್ಲಿ ದುಷ್ಕರ್ಮಿಗಳು ಉಪ್ಪಳ್ಳಿ ಪಾಂಚ್ ಪೀರ್ ದರ್ಗಾಕ್ಕೆ ಹಂದಿ ಮಾಂಸ ಹಾಕಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಇಲಾಖೆಯಿಂದ ನಗದು ಪುರಸ್ಕಾರ. ಚಿಕ್ಕಮಗಳೂರು ನಗರ ಮತ್ತು ಆಲ್ದೂರಿನಂತ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ತಮ್ಮ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಎಲ್ಲರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಹಾಗೂ ಇನ್ನೂ ಅನೇಕ ಕ್ಲಿಷ್ಟ ಪ್ರಕರಣ ಮತ್ತು ಹಲವು ಸುಲಿಗೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ನಿಷ್ಠಾವಂತತೆಯಿಂದ ಶಿರಸಿ, ಆಲ್ದೂರು, ಚಿಕ್ಕಮಗಳೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ವಳಾಲೆಂಬ ಸಣ್ಣ ಊರು ಇವತ್ತು ಸಲೀಂ ಅಬ್ಬಾಸ್ ಹೆಸರಲ್ಲಿ ಅಭಿಮಾನ ಪಡುತ್ತಿದೆ. ನಮ್ಮೂರಿನ ಯುವಕ ಪೊಲೀಸ್ ಅಧಿಕಾರಿ ಎಂದು ಹೆಮ್ಮೆಯಿಂದ ಬೀಗುತ್ತಿದೆ.
ಸಲೀಂ ಅಬ್ಬಾಸ್ ರವರ ಹೆಗಲಿಗೆ ಇನ್ನಷ್ಟು ನಕ್ಷತ್ರಗಳು ಕೂಡಿ ಬರಲಿ, ತನ್ನ ಪ್ರಾಮಾಣಿಕ ಸೇವೆಯು ಸದಾ ಮುಂದುವರಿಯುತ್ತಿರಲಿ ಹಾಗೂ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸುತ್ತಿದೆ.

Saturday, 15 July 2017

ನಾಯಿಯ ಬೊಗಳು

ಮನೆಯಜಮಾನನಿಗೆ
ನಾಯಿ
ಬೊಗಳಲು ಪ್ರಾರಂಬಿಸಿದರೆ
ಒಂದೋ ನಾಯಿಗೆ
ಹಸಿವಾಗಿದೆ
ಅಥವಾ ಹುಚ್ಚು ಹಿಡಿದಿದೆ.
ಬಿಸ್ಕತ್ತ್ ಹಾಕಬೇಕು ಇಲ್ಲವೇ ಕೊಲ್ಲಬೇಕು.

ಗಲ್ಫ್ ಮತ್ತು ಖುಷಿ

ಗಲ್ಫ್ ರಾಷ್ಟ್ರವನ್ನು 
ಊರಿನಲ್ಲಿದ್ದು 
ನೋಡುವುದೇ 
ಖುಷಿ

ಅನುಮತಿ

ಸಂವಿಧಾನ ಬದ್ಧವಾಗಿ
ಕಾರ್ಯಕ್ರಮ ಆಯೋಜಿಸಲು
ಅನುಮತಿ ಸಿಗದ ಜಿಲ್ಲೆಯಲ್ಲಿ,
ಸಂವಿಧಾನ ವಿರೋಧಿಯಾದ
ಬಂದ್ ಗೆ ಅನುಮತಿ ಸಿಗುತ್ತದೆ.

ಹುಟ್ಟು ದಿನದ ಶುಭ ಹಾರೈಕೆ ಕೃತಜ್ಞ

ಶುಭ ಹಾರೈಕೆಗಳ ಮಹಾಪೂರವಿಲ್ಲಿ
ಮೋಡಿ,ಗೆಳೆಯರ ಬಳಗದಲಿ,
ನನ್ನ ನೋವು ಮಾಯವಾಗಿದೆ...
ದೇವನ ರಕ್ಷೆಗಳಿರಲಿ ನಿಮ್ಮ ಬಾಳಲ್ಲಿ
ಕೂಡಿ, ಕಳೆಯುವ ಜಗಳದಲಿ,
ನನ್ನ ಬೇಡಿಕೆ ನ್ಯಾಯವಾಗಿದೆ...
ಆಮೀನ್...❤️

ಪ್ರಯತ್ನ

ಅವರ ಸ್ಪರ್ಧೆಯಿಂದ 
ನಾವು ಸೋತೆವು... 
ಎಂಬುವುದಕ್ಕಿಂತ,
ಗೆಲುವುದಕ್ಕಾಗಿ,
ನಾವೆಷ್ಟು ಪ್ರಯತ್ನಪಟ್ಟೆವು
ಎಂಬುವುದನ್ನು 
ಆತ್ಮಾವಲೋಕನ ನಡೆಸಲಿ

ಈಶ್ವರಪ್ಪ ಹರಕಲು ಬಾಯಿ

'ಕಸ'ವು,
ಕಸ ಗುಡಿಸಲು
ಹೇಳದೆ
ಮತ್ತೇನು ಹೇಳುವುದು

(ಅಲ್ಪಸಂಖ್ಯಾತರು ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಲಿ-ಈಶ್ವರಪ್ಪ ಹೇಳಿಕೆ)

ಜಿಯೋ v/s ಜೀವ


ಜಿಯೋ, 
ಸ್ಥಗಿತಗೊಂಡ
ನಂತರ ಕೆಲವರ 
ಜೀವವೂ,
ಸ್ಥಗಿತಗೊಂಡಿದೆ

ಪೊಲೀಸ್ ಅನುಮತಿ

ಕಾರ್ಯಕ್ರಮದ ಅನುಮತಿಗಾಗಿ 
ಪೊಲೀಸ್ ಠಾಣೆಗೆ ಹೋದೆ...
ಬೈಗುಳ ಹಿಡ್ಕೊಂಡು 
ಹಿಂದುರಿಗಿ ಮನೆಗೆ ಬಂದೆ...

ಸದ್ಯ ಅನುಮತಿ ಬಗ್ಗೆ ದೊಡ್ಡ ಮಾತಾಡ್ತಿದ್ದಾರೆ

ಪೊಲೀಸ್ ಕಮಿಷನರ್ ಕಚೇರಿ ಉದ್ಘಾಟನೆ: ಪ್ರಭಾಕರ್ ಭಟ್ ಮುಖ್ಯ ಅತಿಥಿ

ಮಂಗಳೂರು ಪೊಲೀಸ್ ಕಮಿಷನರ್ 
ಕಚೇರಿಯ ಉದ್ಘಾಟನೆಯಲ್ಲಿ 
ಮುಖ್ಯ ಅತಿಥಿಯಾಗಿ ಪ್ರಭಾಕರ್ ಭಟ್ 
ವೇದಿಕೆ ಹಂಚಿಕೊಂಡಿರುವುದನ್ನು 
ಅವಲೋಕಿಸುವಾಗ 
ಇಂದಿನ ಎಲ್ಲಾ ಘಟನೆಗೆ ಉತ್ತರ ಲಭಿಸುತ್ತಿದೆ. 
ನಿಲ್ಸಿರಿ ನಿಮ್ ನಾಟಕ...
#JusticeForQuraishi #StopPoliceExcesses #DownWithMangalorePolice 

ಸಿಸಿಬಿ ಪೊಲೀಸರಿಂದ ಅಕ್ರಮ ಬಂಧಿಸಲ್ಪಟ್ಟು, ಕಿಡ್ನಿ ವೈಫಲ್ಯಕ್ಕೊಳಗಾದ ಖುರೈಶಿ ಎಂಬ ಯುವಕನ ಪರವಾಗಿ
ನ್ಯಾಯಯುತ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ 
ಲಾಠಿ ಚಾರ್ಜ್ ನಡೆದ ಸಂದರ್ಭ ಹೊಳೆದದ್ದು

ಖಾಕಿ ಮತ್ತು ಪೊಲೀಸ್

ಖಾಕಿ 
ಹಾಕಿದವರೆಲ್ಲಾ
ಪೊಲೀಸರಲ್ಲ

ಚುನಾವಣೆವೆರೆಗೆ ಮಲಗುವ ರಾಜಕಾರಣಿ

ಸೋಲಾಗಲಿ
ಗೆಲುವಾಗಲಿ,
ಬರುವ
ಚುನಾವಣೆವರೆಗೂ
ಮಲಗದೇ ಇರಲಿ

ಬಿಜೆಪಿ ಯ ನಿಲುವು

ಸೋತರೆ, 
ಅದು 
ಅಭ್ಯರ್ಥಿಯ ಸೋಲು...
ಗೆದ್ದರೆ,
 ಅದು
ಪಕ್ಷದ ಗೆಲುವು..
ಇದು
ಬಿಜೆಪಿಯ ನಿಲುವು..

ಗುದ್ದು-ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ 
ಸರಕಾರದಿಂದ
ಹಿಂದುಳಿದ ವರ್ಗಕ್ಕೆ 
ಶಿಕ್ಷಣದ ಮೀಸಲಾತಿ ರದ್ದು, ಸುದ್ದಿ...
ಅಧಿಕಾರಕ್ಕೇರಿಸುವಾಗ
ಸಮಾಜ ಅರಿತಿರಲಿಲ್ಲ
ಕಾವಿಯೊಳಗಿನ ಪೆದ್ದು ಬುದ್ದಿ...

ಸೋನೋ ನಿಗಂ ಕನಸು

ಸೋನೋ ನಿಗಮ್
ಕನಸಾಗಿತ್ತು,
ಆಗಬೇಕು
ಎಲ್ಲರ ಬಾಯಿಯ 
ಚ್ವಿಂಗಮ್

ಸಚಿವರಿಗೊಂದು ಪತ್ರ

ನಾಡಿನ ಜವಾಬ್ದಾರಿಗಾಗಿ
ಹಲವು ಬಾರಿ ಆರಿಸಿ ಸಿಕ್ಕಿದ್ದು
ಜಿಲ್ಲೆಯ ಉಸ್ತುವಾರಿ,
ದಿನ ಕಳೆದಂತೆ...
ಆರಿಸಿ ಸೋತಿದ್ದು ಅರಿವಾಗಿದೆ
ಕೊಟ್ಟು ಕೆಟ್ಟವರ ಜೀವಕೆ
ಲಾಠಿಯ ಮಾರಾಮಾರಿ...!
ನ್ಯಾಯಪಾಲನೆಗೆ ನೀಡಿದ ಓಟು
ಕಾನೂನನು ಉಳಿಸಲಾಗಲಿಲ್ಲ
ದಿನ ಕಳೆದಂತೆ
ಕ್ಷಣ ಕನಿಕರವೂ ಬರಲಿಲ್ಲ!
ಖುರೈಷಿಯ ನ್ಯಾಯ ಬಿಕ್ಕಟ್ಟು
ಸಮುದಾಯವಾಗಿದೆ ಒಗ್ಗಟ್ಟು
ಸರಾಸರಿ ಸ್ವರವೆದ್ದಿದೆ...!
ಸಮಾಜದ ಸಮಸ್ಯೆಗೆ
ಸಮಯವೆಲ್ಲಿ ನಿಮ್ಮ ಬಳಿ
ದಿನ ಕಳೆದಂತೆ
ಜನ ಧ್ವನಿಯ ಅಪ್ಪಚ್ಚಿಯಾಗಿಸುವ
ಪ್ರಜೆ ಘನತೆಯ ಇಲ್ಲವಾಗಿಸಿದ
ಘನವೆತ್ತ ಸಚಿವ ಸಹೋದರರೇ ನೀವು?
ನಾವು ನಮ್ಮಲ್ಲೇ ಕೇಳುತ್ತಿರುವೆವು
ಬೇಕೇ ನಮಗೆ ನಿಮ್ಮಂತವರು?
ಕಾನೂನಿನಡಿಯಲಿ ದೇಶಪ್ರೇಮಿ ಪ್ರಶ್ನೆಗೆ
ಉತ್ತರ ನೀಡುವವರು ಮೌನ!
ದಿನ ಕಳೆದಂತೆ
ತಪ್ಪು ಅರಿವಾಗುತಿದೆ
ಚಿಂತಿಸುವ ಕಾಲ ನಮ್ಮೆದುರುಗಿದೆ..!

ಫಯ್ದಾ

ಫಯ್ದಾ ಉಂಡಾ
ನಾನುಂ ಬಂಡೆ,
ಫಯ್ದಾ ಇಲ್ಲೆ
ನಾನುಂ ಇಲ್ಲೆ

ಘೋಷಣೆ

ಬೇಕಾಗಿದ್ದು...
ಹಸಿವನ್ನು ತಣಿಸಲು ಅನ್ನ,
ಘೋಷಿಸಿದ್ದು...
ಬೈಕು, ಕಾರು & ಎಸಿ

ಪ್ರಧಾನಿಯೊಂದಿಗಿನ ಬೇಡಿಕೆ

ಪ್ರಧಾನಮಂತ್ರಿಗಳೇ, 
ರಸ್ತೆಗಳಿಲ್ಲದ ನಮ್ಮೂರಿಗೆ
ಬೈಕು ಮತ್ತು ಕಾರು
ಕೊಡುವ ಬದಲು 
ವಿಮಾನ ನೀಡಿ ಪ್ಲೀಸ್

ಹಸಿವು ಮತ್ತು ಎಸಿ

ಹಸಿದವರ ಕಣ್ಣುಗಳು
ಎಸಿ ಯ ಗಾಳಿಯಲ್ಲಿ
ಹಸಿವ ತನಿಸುತ್ತಿದೆ

ಎ.ಸಿ ಕೊಡುಗೆ

ಇನ್ನೇನು ಮಳೆಗಾಲ 
ಸಮೀಪಿಸುತ್ತಿದೆ
ಮನೆಯೊಳಗೆ ನೀರು ಬೀಳದ
ಜಾಗದ ಹುಡುಕಾಟದಲ್ಲಿದ್ದೇನೆ.
ಮಲಗಳಲ್ಲ, 
ಎಸಿ ಇಡಲು

ತಲಾಖ್ & ಮೋದಿ

ತಲಾಖ್
ಬಗ್ಗೆ ಮಾತನಾಡಲು
ಮಾನ್ಯ ಮೋದೀಜಿಗಿಂತ
ಜಸೋದಾಬೆನ್ 
ಹೆಚ್ಚು ಅರ್ಹರು..

ಸುಬ್ರಮಣ್ಯ ಸ್ವಾಮಿಗೆ ತಿರುಗೇಟು

ಮುಸ್ಲಿಮ್
ಮಹಿಳೆ ಮೂರನೆ
ದರ್ಜೆ ಜೀವನ ನಡೆಸುತ್ತಿದ್ದಾರೆ.-ಸುಬ್ರಮಣ್ಯ ಸ್ವಾಮಿ
ಜಸೋದಾ ಬೆನ್
ಮುಸ್ಲಿಮ್ ಅಲ್ಲ ಮಹಾಸ್ವಾಮಿ..

ಟೂರಿಸ್ಟ್ ಗಲ್ಫಿಗ

ಜೋಳಿಕ್ಕಾಯಿ
ಗಲ್ಫಿಲೇಕ್ ವನ್ನಾಲ್ 
ಜ್ವಾಲಿ ಇಲ್ಲ..
ಟೂರಿಸ್ಟ್ ಆಯಿ ವನ್ನಾಲ್ 
ಫುಲ್ ಜ್ವಾಲಿಯೇ ಜ್ವಾಲಿ.😂😂


 ಆತ್ಮೀಯ ಕವಿ ಜಲೀಲ್ ಮುಕ್ರಿ ದುಬೈ ಪ್ರವಾಸ ಕೈಗೊಂಡಿದ್ದ ಸಂದರ್ಭ ಹೊಳೆದದ್ದು

ನಾಸ್ತಿಕ ಧರ್ಮ ಭೋದನೆ

ನಾಸ್ತಿಕ ಸಿದ್ಧಾಂತವನ್ನು 
ಮೈಗೂಡಿಸಿಕೊಂಡಿರುವವರು..
ಧರ್ಮದ ಬಗ್ಗೆ
ಉದ್ದದ ಭಾಷಣ ಮಾಡಿದರು...
ನೆರೆದಿದ್ದ ಬೃಹತ್ ಜನಸ್ತೋಮ 
ಬಿರಿಯಾನಿ ತಿಂದು ನಿದ್ರೆಗೆ ಜಾರಿದ್ದರು..

ಗಡ್ಡವಿಲ್ಲದ ನನ್ನ ಮುಖ

ಪ್ರೇರಣೆ: ಬಿ. ಎಂ. ಬಷೀರ್ ರವರ ನನ್ನ ಮಸೀದಿಯನ್ನು ದ್ವಂಸಗೈದವರಿಗೆ ಕೃತಜ್ಞ ಕೃತಿ.

ಗಡ್ಡವಿಲ್ಲದ ನನ್ನ
ಮುಖವ ನೋಡಿ,
'ನೀನೊಬ್ಬ ಯಹೂದಿ'
ಎನ್ನುತ್ತಾ..
ಗಡ್ಡ ಬಿಡಲು 
ಹೇಳಿದಾತನ
ನಾಲಗೆಯು ಆತನ
ಗಡ್ಡಕ್ಕಿಂತ ಉದ್ದವಾಗಿ
ಬೆಳೆದು ನೇತಾಡುತ್ತಿತ್ತು..!
ಕೆಲವರು ಆ ನಿನ್ನ
ಮನಮೋಹಕ ಸ್ವರ್ಗದ
ಮೇಲಿನ ಆಸೆಗಾಗಿ,
ಇನ್ನು ಕೆಲವರು ನಿನ್ನ
ಆ ಭಯಾನಕ ನರಕದ
ವಿಮೋಚನೆಗಾಗಿ,
ಓ ದೊರೆಯೇ..,
ಈ ಗಡ್ಡವಿಲ್ಲದ
ಪಾಪಿಯನ್ನಾದರೂ,
ನಿನಗಾಗಿ ಮಾತ್ರ ಮಾಡು.,
ತಾನು ಗಡ್ಡಬಿಟ್ಟು
ಒಂದು ಪ್ರವಾದಿ
ಚರ್ಯೆಯನ್ನು
ಜೀವಂತಗೊಳಿಸಿದೆ
ಎಂದಾತ...
ತನ್ನ ನಡತೆಯಲ್ಲಿ
ಹತ್ತು ಹಲವು
ಪ್ರವಾದಿ ಚರ್ಯೆಯನ್ನು
ಅದಾಗಲೇ ಕೊಲೆ
ಮಾಡಿದ್ದ....!!
ಅವಳು ನೀಡಿದ್ದ ಆ
ನೋವು ನನ್ನನ್ನು
ಇನ್ನು ಎದ್ದೇಳದಂತೆ
ಸುಟ್ಟು ಕೊಂದಿರಬಹುದು,
ಆದರೆ ಗಡ್ಡಬಿಟ್ಟವರು
ನೀಡುತ್ತಿರುವ ಈ
ನೋವು, ಮುಂದೆ ನನ್ನ
ದೊರೆಯ ಧರ್ಮವನ್ನೇ
ಸುಡಬಹುದೆಂದು
ಚಿಂತಿತನಾಗಿದ್ದೇನೆ...!!
ಮುಖದ ಮೇಲಿರುವ
ಉದ್ದವಾದ ಗಡ್ಡ...
ನಿಮ್ಮನ್ನು ನನ್ನ ದೊರೆಯ
ಬಳಿ ಒಯ್ಯಲಾರದು...
ಧರ್ಮ ಪುರೋಹಿತರೇ...
ಅವನು ನಿಮ್ಮ ಎದೆಯ ಬಗೆದು
ಗುರುತನ್ನು ಹುಡುಕುವನು..,

ಗೆದ್ದ ಬಣ

ಗೆದ್ದದ್ದು ಬಣಗಳೇ ಹೊರತು
'ಯೂತ್ಸ್' ಅಲ್ಲವೇ ಅಲ್ಲ

ಗೆದ್ದು ಸೋತ ಯೂತ್

ಗೆದ್ದವನು,
ಸೋತವನ ಮನೆಯ ಮುಂದೆ
ತನ್ನ ಗೆಲುವನ್ನು ಸಂಭ್ರಮಾಚರಿಸಿ..
ಮಾಧ್ಯಮದ ಮುಂದೆ 
ಯೂತ್ ನ್ನು ಬಲಪಡಿಸಬೇಕೆಂದುಕೊಂಡಿದ್ದೇನೆ ಎಂದ

(ಯೂತ್ ಕಾಂಗ್ರೆಸ್ ವಿಜಯ ಸಂಭ್ರಮ)

Mother's Day ಮತ್ತು ತಾಯಿಯ ಪ್ರಾರ್ಥನೆ

Mother's day ಗ್ ಉಮ್ಮರೊಟ್ಟ 
selfy ಯೆಂಡ್ತ್ ಟ್ ಪೋಯೋ ಮೋನೊಡೊ
ತಿರ್ಚಿ ಬರಾತೆದ್ ಕಾನಾಂಟ್ 
ಉಮ್ಮಾ 'Mother's day'
ಎಲ್ಲಾ ನಾಲ್ ಆಕೊಗು ದುವಾ ಆಕಿಯೋ ಇಂತ್

ಬಾಯಿ ಮತ್ತು ಮನಸ್ಸು

ಬಾಯಿಲ್ ಚೆಲ್ರೆದ್,
ಮನಸ್ಸ್ ಲ್ ಆಕಿತ್ ಇನ್ನ್ರೆಂಗ್
ದುನಿಯಾವು ಚೊಮ್ಮೆ
ಬದಲಾವಣೆರೊ ಕಾನಾಂತ್


ಬಾಯಲ್ಲಿ ಹೇಳುವುದು
ಮನಸ್ಸಲ್ಲಿ ಮಾಡುತ್ತಿದ್ದರೆ
ಸಮಾಜ ಬಹಳಷ್ಟು
ಬದಲಾವಣೆಯಾಗುತ್ತಿತ್ತು

ಐಪಿಎಲ್ & ಮುಂಬೈ ಸ್ಲಂ

ಐಪಿಎಲ್ ಲ್
ಮುಂಬಯಿ ಇಂಡಿಯನ್ಸ್ ಗೆಂದಿತ್ತ್...
ಇಂಡಿಯತ್ತೆ ಮುಂಬಯಿಲುಲ್ಲೆ
ಸ್ಲಂ ಲ್ರೆ ಆಲ್ಮಾರ್ ಗೆಂದುವಾರ?


ಕನ್ನಡ:

ಐಪಿಎಲ್ ನಲ್ಲಿ
ಮುಂಬೈ ಇಂಡಿಯನ್ಸ್ ಗೆಲುವು..

ಮುಂಬೈ ಯಲ್ಲಿರುವ
ಸ್ಲಂ ಜನತೆ ಗೆಲುವಾಗಬಹುದೇ?

'ರೈ' ಯ ರಾಜಕೀಯ ಅಸ್ತ್ರ

ಬಿಜೆಪಿಗೆ "ಗೋವು"
ರಾಜಕೀಯ ಅಸ್ತ್ರವಾದರೆ,

ಕಾಂಗ್ರೆಸ್ಸಿನ ರಮಾನಾಥ ರೈಗೆ 
ಪ್ರಭಾಕರ್ ಭಟ್ ಹೆಸರೇ ಬಹುದೊಡ್ಡ ಅಸ್ತ್ರ

ಶಾಂತಿಗೆ ಎಸೆದ ಕಲ್ಲು

ಕಲ್ಲನ್ನೇನು ಎಸೆದು ಬಿಟ್ಟಿರಿ,
ಎಸೆಯಲು ತಿಳಿಸಿದವನ 
ತಲೆಗೆ ಎಸೆಯುತ್ತಿದ್ದರೆ
ಜಿಲ್ಲೆಯಾದರು
ಶಾಂತಿಯಿಂದ ಜೀವನ ಸಾಗಿಸುತ್ತಿತ್ತು.

ನಕಲಿ ದೇಶಪ್ರೇಮ

ಸಾಮಾಜಿಕ ತಾಣದಲ್ಲಿದ್ದ
ಆತನ ದೇಶಪ್ರೇಮ
ಸಾಮಾಜಿಕ ಜೀವನದಲ್ಲಿರಲೇ ಇಲ್ಲ

Father's Day

ಬಾಪ ಎಂದ್ರೆಂಟ್,
ಬಾಪಯಪ್ಪ
ಮಾತ್ರ ಗೊಂತಾವು

ಅನಿವಾಸಿಯ ದೇಶಪ್ರೇಮ

ಅನಿವಾಸಿಯು 
ಊರಿಗೆ ಹೋಗಲು 
ತಯಾರಿ ನಡೆಸಿದಷ್ಟು,
ತನ್ನ ಮದುವೆಗೂ
ತಯಾರಿ ನಡೆಸಿರಲಿಕ್ಕಿಲ್ಲ.

ಪೀತ ಪತ್ರಿಕೆಯ ಚಿಂತೆ

ತಂಡವು ಸೋಲು ಅನುಭವಿಸಿದ ಚಿಂತೆಗಿಂತ,
ಪೀತ ಪತ್ರಿಕೆಯೊಂದು
ತಲೆಬರಹದ ಚಿಂತೆಯಲ್ಲಿತ್ತು

(ಪಾಕಿಸ್ತಾನ ವಿರುದ್ಧದ ಕಿಕ್ರೆಟ್ ಪಂದ್ಯಾಟದಲ್ಲಿ ಭಾತಕ್ಕೆ ಸೋಲು)

ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ನಿಜವಾಗಿ ರಕ್ಷಣೆ ನೀಡುತ್ತಿದೆಯಾ?

ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಈ ಮುಂದೆ ಹಲವಾರು ಕೋಮು ವಿಷಬೀಜ ಬಿತ್ತಿ ಮತ್ತು ಅದರಿಂದ ಪ್ರಚೋದಿತಗೊಂಡ ಸಂಘಪರಿವಾರದ ಕಾರ್ಯಕರ್ತರು ಮಸೀದಿಗೆ, ಮುಸಲ್ಮಾನರ ಮನೆಗಳಿಗೆ, ಅಂಗಡಿಗಳಿಗೆ ಕಲ್ಲು ತೂರಾಟ ನಡೆಸಿ ಗಲಭೆಗಳನ್ನು ಸೃಷ್ಠಿಸಿದಾಗಲೆಲ್ಲಾ ಬಂಧನಕ್ಕೊಳಗಾಗುತ್ತಿದ್ದವರು ಮತ್ತು ಸದ್ಯ ಕಲ್ಲಡ್ಕದಲ್ಲಿ ನಡೆಯುತ್ತಿರುವ ಘಟನೆಗಳೆಲ್ಲಾ ಬಂಧನಕ್ಕೊಳಪಡುತ್ತಿರುವವರು ಶಾಂತಿ ಸಹನೆಯೆಂದು ತನ್ನ ಧರ್ಮ ಕಲಿಸಿದ್ದನು ಪಾಲಿಸುತ್ತಿರುವ ಮುಸಲ್ಮಾನರು.. ರಮದಾನ್ ಪ್ರಾರಂಭದಲ್ಲೂ, ನಡುವಿನಲ್ಲೂ ನಡೆದ ಘಟನೆಯಲ್ಲಿ ಇದೇ ಪುನಾರಾವರ್ತನೆಗೊಂಡಿದೆ.


'ಅಲ್ಪಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ'ವೆಂದು ಚುನಾವಣಾ ಪ್ರಚಾರದಲ್ಲಿ ಉದ್ದುದ್ದದ ಭಾಷಣ ಮಾಡಿ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಬೊಗಳೆ ರಾಜಕಾರಣಿಗಳು ನಿರಂತವಾಗಿ ಅದೇ ಅಲ್ಪಸಂಖ್ಯಾತರ ಹತ್ಯೆ ಅವರ ಮೇಲೆ ಹಲ್ಲೆ ,ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದರೂ ಬೊಗಳೆ ಜನಪ್ರತಿನಿಧಿಗಳು ಮಾತ್ರ ಪತ್ರಿಕಾ ಹೇಳಿಕೆಯಲ್ಲಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ರಕ್ಷಣೆಯನ್ನು ಮಾಡ ಹೋರಟಿರುವುದು ಜಿಲ್ಲೆಯಲ್ಲಿ ಇನ್ನಷ್ಟು ಘಟನೆಗಳು ಹೆಚ್ಚಾಗಲು ಪ್ರಮುಖ ಕಾರಣ.

ಕೋಮು ವೈಷಮ್ಯವನ್ನು ಸೃಷ್ಠಿಸುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡಿರುತ್ತಿದ್ದರೆ ಸಂಘಪರಿವಾರದ ವ್ಯವಸ್ಥಿತ ರಾಜಕೀಯ ಸಂಚಿಗೆ ಮುಸಲ್ಮಾನೆಂದು ಅಂದಾಜಿಸಿ ಹತ್ಯೆಗೈಯ್ಯಲ್ಪಟ್ಟ ಬಿಸಿರೋಡಿನ ಹರೀಶ್, ಗೋ ರಾಜಕೀಯಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ಕುಂದಾಪುರದ ಪ್ರವೀಣ್, ಜನಪ್ರತಿನಿಧಿಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದ ಜನನಾಯಕನಾಗಿದ್ದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ, ಮೈಸೂರಿನ ಕಾರಾಗ್ರಹದಲ್ಲಿ ಬಿಡುಗಡೆಯಾಗುವ ಕೆಲವೇ ಗಂಟೆಗಳ ಮೊದಲು ನಿರಪರಾಧಿ ಮುಸ್ತಫಾ ಕಾವೂರು, ಮಂಗಳೂರು ಕಾರಾಗೃಹದಲ್ಲಿ ಯೂಸುಫ್ ಮಾಡುರು, ಮಂಗಳೂರಿನ ಹೃದಯ ಭಾಗದಲ್ಲಿ ನಗ್ನತೆಯಲ್ಲಿ ದೌರ್ಜನ್ಯಕ್ಕೊಳಗಾದ ಯುವಕ, ರಾಜ್ಯದ ಪ್ರಗತಿಪರರ ಹತ್ಯೆ ಮತ್ತು ಅವರ ಮೇಲೆ ನಡೆದ ಹಲ್ಲೆ ಮತ್ತು ಮಸಿ ಎರಚಾಟ , ಗೋಮಾಂಸದ ಹೆಸರಲ್ಲಿ ಕೋಮಾಸ್ಥಿತಿಯಲ್ಲಿ ನರಳುತ್ತಿರುವ ಯುವಕರು, ನೆರೆ ರಾಜ್ಯದ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದಾಗ ಮಾಡಿದ ಕ್ರೌರ್ಯತೆ, ಚಿತ್ರನಟಿಯ ಮೇಲೆ ಮೊಟ್ಟೆ ಎಸೆತ, ವಿವಿಧ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಗಂಭೀರವಾಗಿ ನಡೆದ ಹಲ್ಲೆಗಳು ಹಾಗೂ ಜೀವನದ ಅಂತಿಮ ಕ್ಷಣಗಳವರೆಗೆ ಸಮಾಜದ ಹಿತಕ್ಕಾಗಿ ಜೀವನ ಮುಡಿಪಾಗಿಟ್ಟು ಸಂಘಪರಿವಾರದ ದುಷ್ಕರ್ಮಿಗಳಿಂದ ಅಮಾನವೀಯವಾಗಿ ಹತ್ಯೆಗೊಳಗಾದ ಅಶ್ರಫ್ ಕಲಾಯಿಯು ಹತ್ಯೆಗೊಳಗಾಗುತ್ತಿರಲಿಲ್ಲ. ಈ ಎಲ್ಲಾ ಸಂದರ್ಭದಲ್ಲಿ ಮಾಧ್ಯಮವು ತನ್ನದೇ ಶೈಲಿಯಲ್ಲಿ ಹತ್ಯೆಯಲ್ಲೂ, ದೌರ್ಜನ್ಯದಲ್ಲೂ ಪಾಲುಗಾರಿಕೆ ಪಡೆದುಕೊಂಡಿರುವುದು ವಿಶೇಷತೆ. ಅಲ್ಪಸಂಖ್ಯಾತರ ಹತ್ಯೆ, ಅವರ ಮೇಲೆ ಹಲ್ಲೆ ದೌರ್ಜನ್ಯಗಳು ನಡೆದಾಗ ಕುರುಡರಂತೆ ವರ್ತಿಸಿ ಸಂಘಪರಿವಾರದ ದ್ವೇಷ ರಾಜಕಾರಣಕ್ಕೆ ಅಲ್ಪಸಂಖ್ಯಾತರಿಗೆ ಚಳ್ಳೆ ಹಣ್ಣು ತಿನ್ನಿಸುವುದರ ಮೂಲಕ ಇನ್ನಷ್ಟು ಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿತ್ತು. ಪೂರಕವೆಂಬಂತೆ ಇಂದು ನಡೆದ ಹತ್ಯೆಯಲ್ಲೂ ಇದು ಪುನರಾವರ್ತನೆಗೊಂಡಿದೆ. ‘ರೌಡಿ ಶೀಟರ್ ಹತ್ಯೆ’ಯೆಂದು ತಲೆಬರಹ ನೀಡಿ ಘಟನೆಯ ಹಾದಿ ತಪ್ಪಿಸಿ ಘಟನೆಯ ನ್ಯಾಯ ಮರೀಚಿಕೆಗೆ ಪ್ರಥಮ ಬೆದರಿಕೆಯೊಡ್ಡಿದ ಚಾಣಾಕ್ಷಣತೆ ಇದು. ಈ ಘಟನೆಯಲ್ಲಿ ಹತ್ಯೆ ಆರೋಪಿಗಳಷ್ಟೇ ಆರೋಪಿ ಸ್ಥಾನದಲ್ಲಿ ಕಾಣಬೇಕಾಗಿರುವುದು ರೌಡಿ ಶಿಟರ್ ಎಂಬ ತಲೆ ಬರಹ ನೀಡಿ ಘಟನೆಯ ದಾರಿ ತಪ್ಪಿಸಲು ನಡೆಸಿದ ಮಾಧ್ಯಮವನ್ನು. ಈ ಎಲ್ಲಾ ಘಟನೆಗಳ ಹಿಂದೆ ಬಿಜೆಪಿ ಯೆಂಬ ಜನವಿರೋಧಿ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೇಲೆತ್ತುವ ಕೆಲಸವಾಗಿದೆ ಎಂಬುವುದು ಸಾಬೀತಾಗುತ್ತಿದೆ.

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಕಾರ್ಯ ನಿರ್ವಹಣೆಯು ಅತ್ಯಂತ ಆತಂಕಕಾರಿಯಾಗಿ ಪರಿಣಮಿಸುತ್ತಿದೆ. ಕೋಬ್ರಾ ಪೋಸ್ಟ್ ಅಕ್ಷರಶಃ ಸತ್ಯವಾಗಿ ಗೋಚರಿಸ ತೊಡಗಿದೆ. ದಕ್ಷ ಅಧಿಕಾರಿಗಳನ್ನು ವರ್ಗಾಯಿಸಲಾಗುತ್ತಿದೆ. ನ್ಯಾಯಕ್ಕಾಗಿ ಪ್ರತಿಭಟಿಸಿದವರ ವಿರುದ್ಧವೇ ಲಾಠಿ ಚಾರ್ಜ್ ನಡೆಸಲಾಗುತ್ತೆ ಮತ್ತು ಬಂಧನಕ್ಕೊಳಪಡಿಸಲಾಗುತ್ತಿದೆ. ಪ್ರತಿಭಟನೆಯ ಹಕ್ಕನ್ನು ಕಸಿಯಲಾಗುತ್ತಿದೆ, ಕೇಸು ದಾಖಲಿಸಲು ಪೊಲೀಸ್ ಮೆಟ್ಟಿಲೇರಿದವರ ವಿರುದ್ಧವೇ ಕೇಸು ಜಡಿಯಲಾಗುತ್ತಿದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡಲಾಗುತ್ತಿದೆ ಮತ್ತು ಕೋಮುವೈಷ್ಯಮ್ಯ ಬಿತ್ತುವ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಿಲ್ಲದೆ ಪರವಾನಿಗೆ ನೀಡಿ ಕೋಮು ಗಲಭೆಗೆ ಸಹಕಾರ ನೀಡುತ್ತಿದೆಯಾ ಎಂಬ ದಟ್ಟವಾದ ಸಂಶಯ ಜನಸಾಮಾನ್ಯರಲ್ಲಿ ಎಡೆಮಾಡಿಕೊಡುತ್ತಿದೆ. ಅಮಾಯಕರನ್ನು ಬಂಧಿಸಿ ಹಿಂಸಿಸಲಾಗುತ್ತಿದೆ. ಮನೆ ಮನೆಗಳಿಗೆ ನುಗ್ಗಿ ಮಹಿಳೆಯರನ್ನದೇ ದೌರ್ಜನ್ಯವೆಸಗಲಾಗುತ್ತಿದೆ. ನ್ಯಾಯಾಲಯಗಳಿಗೆ ಸುಳ್ಳು ವರದಿಯನ್ನೇ ಒಪ್ಪಿಸಿ ಸತ್ಯವೆಂದು ನಂಬಿಸಲಾಗುತ್ತಿದೆ. ದಕ್ಷ ಅಧಿಕಾರಿಗಳ ಕೈ, ಬಾಯಿಯನ್ನು ಕಟ್ಟಿಹಾಕಲಾಗುತ್ತಿದೆ. ಹೀಗೆ ಪೊಲೀಸ್ ಇಲಾಖೆಯಲ್ಲೂ ಸಂಘಪರಿವಾರದ ಕ್ರೌರ್ಯತೆ ಹೆಚ್ಚಾಗುತ್ತಿದೆ. ಸಂಘಪರಿವಾರದೊಂದಿಗೆ ಜೊತೆಗೂಡಿ ತನ್ನದೇ ಸಹೋದರಿ ಹಾಗೂ ಆಕೆಯ ಪ್ರಿಯತಮನ ಕೈಯ್ಯಿಂದ ಹತ್ಯೆಯಾದ ಕಾರ್ತಿಕ್ ರಾಜ್ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯ ಸಹಿಸಿದ ಮತ್ತು ಬಂಧನಕ್ಕೊಳಗಾದ ಮುಸಲ್ಮಾನ ಯುವಕರೆಷ್ಟು. ಇದೇ ಕಾರ್ತಿಕ್ ರಾಜ್ ಹತ್ಯೆಯ ವಿರುದ್ಧ ಸಂಘಪರಿವಾರ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲೆಗೆ ಬೆಂಕಿ ಇಡಲು ತಯಾರಿದ್ದೇವೆ ಎಂದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗುವುದಿಲ್ಲವೆಂದಾದರೆ? ಕಲ್ಲು ತೂರಾಟದ ಸಂದರ್ಭ ಪೊಲೀಸ್ ಮದ್ಯದಲ್ಲಿ ನಿಂತು ಮೂಕಪ್ರೇಕ್ಷಕರಾಗುತ್ತಾರೆ ಎಂದರೆ? ರಕ್ಷಣೆ ಕೊಡಬೇಕಾದವರು ಯಾರು? ರಕ್ಷಕರೇ ರಾಕ್ಷಸರಾದರೇ ರಕ್ಷಣೆಗಾಗಿ ಈ ಸಮುದಾಯ ಯಾರನ್ನು ನಂಬಬೇಕು? ಅಲ್ಪಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯವೆಂದರು ಎಲ್ಲಿದ್ದಾರೆ? ಇದ್ಯಾವುದರ ಬಗ್ಗೆಯೂ ವಿಧಾನ ಸಭೆಯೊಳಗಡೆ ಚರ್ಚೆ ನಡೆಯುವುದಿಲ್ಲವೆಂದರೆ? ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಮರೀಚಿಕೆಯಾಗಿಯೇ ಉಳಿಯಲಿದೆ.

ಸರಕಾರ ದಕ್ಷಿಣ ಕನ್ನಡದಲ್ಲಿ ನಡೆದಿರುವ ಎಲ್ಲಾ ಘಟನೆಗಳನ್ನು ಪುನರ್ ಪರಿಶೀಲಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಜಾಮೀನು ರಹಿತ ಕೇಸು ದಾಖಲಿಸಿ ಅವರನ್ನು ಕಾನೂನಿನ ಹದ್ದುಬಸ್ತಿನಲ್ಲಿಡಲಿ.

ಸಹೋದರ ಅಶ್ರಫ್ ರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ, ಸಹನೆ ಯನ್ನು ಜಗದೊಡೆಯನು ಕುಟುಂಬಿಕರೊಂದಿಗೆ ನಮಗೂ ನೀಡಲಿ. ಅಮೀನ್
ಕೋಮುವಾದಿಗಳ ಹಿಡನ್ ಅಜೆಂಡಾಕ್ಕೆ ಜೀವನವನ್ನೇ ತ್ಯಾಗ ಮಾಡಿದ ಸಹೋದರರೇ, ಸಾವಿರಾರು ಹೃದಯಗಳಲ್ಲಿ ಭದ್ರವಾಗಿ ನೆಲೆನಿಂತಿದ್ದೀರಿ.
-ರಿಲ್ವಾನ್ ಹುಸೈನ್ ವಳಾಲ್

ಅಶ್ರಫ್ ಕಲಾಯಿ ಕನಸು

ಅಶ್ರಫ್ ಅಂದುಕೊಂಡಿರಲಿಲ್ಲ,
ಸರಿಮಾಡುತ್ತಿರುವ ಈ ರಸ್ತೆಯಲ್ಲಿ
ನಾ ಸಂಚರಿಸಲಿಕ್ಕಿಲ್ಲವೆಂದು
ಆದರೆ ಕನಸೊಂದಿತ್ತು,
ನಾ ಸಂಚರಿಸದಿದ್ದರೂ ಪರವಾಗಿಲ್ಲ,
ನನ್ನ ಸಮಾಜ, 
ಪ್ರಯಾಸವಿಲ್ಲದೆ ಸಂಚರಿಸಲಿ ಎಂದು.

ಲಾಠಿ - ಕೆ.ಟಿ

ಕಾಣಲೇ ಇಲ್ಲ
ಯುವಕರ ಮೇಲೆ ಬಿದ್ದ ಲಾಠಿ,
ಪ್ರಚಾರಗೊಳ್ಳುತ್ತಿದೆ
ಒಂದೊತ್ತು ಕುಡಿದ ಕೆ.ಟಿ

ಕೆ.ಟಿ ಗೆ ಲಾಠಿಯ ಪ್ರಚಾರ

ಕುಡಿದದ್ದು ಕೆ.ಟಿ,
ತಿಂದದ್ದು ಲಾಠಿ ಯಂತೆ
ಪ್ರಚಾರ ಪಡೆಯುತ್ತಿದೆ

ಜನಪ್ರತಿನಿಧಿಗಳೆಂದರೆ? ಜನರ ಅಭಿಪ್ರಾಯ

ಹಲವರ ಮನಸ್ಸಲ್ಲಿ
ಇಂದಿಗೂ ಚಾಲ್ತಿಯಲ್ಲಿರುವುದು
ಜನಪ್ರತಿನಿಧಿಗಳೆಂದರೆ
ರಸ್ತೆ ಮಾಡಿಕೊಡುವವರೆಂದು

ಮೋದಿಯ ಇಸ್ರೇಲ್ ಭೇಟಿ

ಗುಜರಾತ್ನ ಬೀದಿ ಬೀದಿಗಳಲ್ಲಿ 
ರಕ್ತದ ದಾಹವನ್ನು ಹೀರಿದ ಮೋದಿಗೆ,
ಪ್ಯಾಲೆಸ್ತೀನ್ ಕಂದಮ್ಮಗಳ ರಕ್ತ ಹೀರಿದ ಇಸ್ರೇಲ್, 
ಭಯೋತ್ಪಾದಕ ರಾಷ್ಟ್ರವಾಗಿ ಕಾಣುವುದಾದರೂ ಹೇಗೆ?



ಭಕ್ತರ ಕೂಗು


ಮೋದಿ ಮಾಡಿದ್ದೆಲ್ಲವೂ ಮೋಡಿ,
ನಾವು ಮಾಡುವುದೆಲ್ಲವು ಚಾಡಿ

ಚೆಡ್ಡಿ ತೊಟ್ಟ ಲಾಠಿ


ಸಂವಿಧಾನ ಬದ್ಧವಾಗಿ ಪ್ರತಿಭಟಿಸಿದಾಗ
ಲಾಠಿ ಚಲಾವಣೆಯಾಗುತ್ತೆ
ಸಂವಿಧಾನವನ್ನು ಗಾಳಿಗೆ ತೂರಿ ಪ್ರತಿಭಟಿಸಿದಾಗ
ಲಾಠಿ ಚಲಾವಣೆಯಾಗುವುದಿಲ್ಲ